

ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ಆಟದ ಜತೆಗೆ ಹುತಾತ್ಮ ಸೈನಿಕರನ್ನು ಸ್ಮರಿಸುವ ಕಾರ್ಯ ಯುವಕರಲ್ಲಿ ದೇಶಪ್ರೇಮ ಮೂಡಿಸಲು ಸಹಕಾರಿ. ಇಂತಹ ಕಾರ್ಯಕ್ರಮಗಳ ಮೂಲಕ ನಡೆದ ಕ್ರೀಡಾಕೂಟದಿಂದ ಉಳಿಕೆ ಮೊತ್ತವನ್ನು ಸಮಾಜಸೇವೆಗೆ ಬಳಸಿಕೊಳ್ಳಿ ಎಂದು ವೀರಕಂಭ ಗ್ರಾಪಂ ಉಪಾಧ್ಯಕ್ಷ ಜನಾರ್ದನ ಪೂಜಾರಿ ಹೇಳಿದರು.
ವೀರಕಂಭ ಗ್ರಾಮದ ಟೀಮ್ ವೀರಕಂಭ ಆಶ್ರಯದಲ್ಲಿ ವೀರಕಂಭ ಗ್ರಾಮದ ನಂದನತಿಮಾರ್ ಮೈದಾನದಲ್ಲಿ ಆಹ್ವಾನಿತ ತಂಡಗಳ ಕ್ರಿಕೆಟ್ ಪಂದ್ಯಾಟ ಸಿಂಧೂರ್ ಟ್ರೋಫಿ ಉದ್ಘಾಟಿಸಿ ಮಾತನಾಡಿದರು.
ಪಂಚಾಯಿತಿ ಸದಸ್ಯರಾದ ದಿನೇಶ್ ಪೂಜಾರಿ, ನಿಶಾಂತ್ ರೈ, ಸಂದೀಪ್ ಪೂಜಾರಿ ಕೆಲಿಂಜ, ಮಾಜಿ ಸದಸ್ಯರಾದ ರಾಮಚಂದ್ರ ಪ್ರಭು, ಜಯಪ್ರಕಾಶ್ ತೆಕ್ಕಿಪಾಪು, ಶೀನಪ್ಪ ಗೌಡ ನಂದನತಿಮಾರ್, ಸಂದೀಪ್ ಶೆಟ್ಟಿ ಅರೆಬೆಟ್ಟು, ಕೃಷ್ಣಪ್ಪ ಪೂಜಾರಿ ಕೆಪುಳಕೋಡಿ, ಕೇಶವ ನಾಯ್ಕ ಕೆಮ್ಮಟೆ, ಆನಂದ ಆಳ್ವ ಗೊಳ್ತಾಮಜಲ್, ರಮೇಶ್ ಗೌಡ ಮೈರಾ, ತಿಲಕ್ ರಾಜ್, ನಾಗರಾಜ್ ಶೆಟ್ಟಿ ಅರೆಬೆಟ್ಟು, ವೇಣುಗೋಪಾಲ್ ವಿ.ಆರ್ ಕೆ, ಸೌಮ್ಯ ವೇಣುಗೋಪಾಲ್, ಪ್ರಶಾಂತ್ ತೆಕ್ಕಿಪಾಪು, ಕೇಶವ ವಿ.ಆರ್ ಕೆ, ಸತೀಶ್ ನಾಯ್ಕ ಕಿನ್ನಿಮೂಲೆ, ಧನರಾಜ್ ಗಾಣಿಗ ಗುಡ್ಡೆ ತೋಟ ಮೊದಲಾದವರು ಉಪಸ್ಥಿತರಿದ್ದರು. ಪಂದ್ಯಾಟ ಸಂಘಟಕ ಪ್ರಮುಖರಾದ ಮೇಘನಾಥ್ ರೈ ವೀರಕಂಭ ಸ್ವಾಗತಿಸಿದರು. ನಿತೀಶ್ ಗೌಡ ಮೈರಾ ವಂದಿಸಿದರು. ಡಿಜೆ ಮಿಥುನ್ ಕಾರ್ಯಕ್ರಮ ನಿರೂಪಿಸಿದರು.
ರಾಯಪ್ಪಕೋಡಿ ಫ್ರೆಂಡ್ಸ್ ಪ್ರಥಮ
ಸಿಂಧೂರ ಟ್ರೋಫಿ ಪಂದ್ಯಾಟದಲ್ಲಿ ಪ್ರಥಮ ಬಹುಮಾನವನ್ನು ರಾಯಪ್ಪಕೋಡಿ ಫ್ರೆಂಡ್ಸ್, ದ್ವಿತೀಯ ಬಹುಮಾನವನ್ನು ತುಳಸಿವನ ಸಿದ್ಧಿವಿನಾಯಕ, ಪ್ರೀತಿಯ ಬಹುಮಾನವನ್ನು ವೀರಕಂಭ ಟೀಮ್ ಪಡೆದುಕೊಂಡಿತು.
ಸೈನಿಕರಿಗೆ ಪುಷ್ಪಾರ್ಚನೆ ಕಾರ್ಯಕ್ರಮ
ಸಿಂಧೂರ್ ಟ್ರೋಫಿಯಲ್ಲಿ ಭಯೋತ್ಪಾದಕರ ದಾಳಿಯಿಂದ ಮರಣ ಹೊಂದಿದ ಭಾರತೀಯರಿಗೆ ಗೌರವ ಶ್ರದ್ಧಾಂಜಲಿ, ಯಶಸ್ವಿ ಸಿಂಧೂರ ಆಪರೇಷನ್‌ನಲ್ಲಿ ವೀರಮರಣ ಹೊಂದಿದ ಭಾರತೀಯ ಸೈನಿಕರಿಗೆ ಪುಷ್ಪಾರ್ಚನೆ ಕಾರ್ಯಕ್ರಮದಲ್ಲಿ ಪುಷ್ಪ ಸಮರ್ಪಿಸಲಾಯಿತು.