

ವಿರಾಜಪೇಟೆ : ಗ್ರಾಮೀಣ ಮಟ್ಟದಲ್ಲಿ ಪ್ರತಿಭೆಗಳನ್ನು ಗುರುತಿಸಿ ಕ್ರೀಡಾ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಸಂತ ಅನ್ನಮ್ಮ ಕ್ರೈಸ್ತ ಸ್ನೇಹಿತರ ಸಂಘದ ಕಾರ್ಯದರ್ಶಿ ಡೇನಿಯಲ್ ಸಲ್ಡಾನ ತಿಳಿಸಿದರು.
ಸಂತ ಅನ್ನಮ್ಮ ಕ್ರೈಸ್ತ ಸ್ನೇಹಿತರ ಸಂಘ, ಸಂತ ಅನ್ನಮ್ಮ ದೇವಾಲಯದ 13 ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಗ್ರಾಮಾಂತರ ಮಟ್ಟದ ಮುಕ್ತ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ. ಡಿ.7 ಮತ್ತು 8 ರಂದು ಸಂತ ಅನ್ನಮ್ಮ ಶಾಲಾ ಮೈದಾನದಲ್ಲಿ ನಡೆಯಲಿದೆ. ಒಟ್ಟು 26 ತಂಡಗಳು ಭಾಗವಹಿಸುತ್ತಿವೆ. ವಿಜೇತ ತಂಡಕ್ಕೆ ಆಕರ್ಷಕ ಟ್ರೋಫಿ ಮತ್ತು ನಗದು, ವೈಯಕ್ತಿಕ ಬಹುಮಾನಗಳನ್ನು ನೀಡಲಾಗುತ್ತದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಘದ ಸದಸ್ಯ ಜ್ಯೂಡಿ ವಾಜ್ ಮಾತನಾಡಿ, ತಂಡ ನೋಂದಾಯಿಸಲು ಡಿ.1 ಅಂತಿಮ ದಿನವಾಗಿದೆ. ಮಾಹಿತಿಗೆ 9480605238, 9483910464 ಸಂಪರ್ಕಿಸಬಹುದು ಎಂದರು. ಸಂಘದ ಅಧ್ಯಕ್ಷ ಜಾನ್ಸನ್ ಡಿಸೋಜ, ಉಪಾಧ್ಯಕ್ಷರಾದ ಜೋಸೆಫ್ ಡಿಸೋಜಾ, ಕೋಶಾಧಿಕಾರಿ ಆಗಸ್ಟಿನ್ ಕ್ಸೆವಿಯರ್, ಕ್ರೀಡಾ ಕಾರ್ಯದರ್ಶಿ ಬಿಲ್ಟನ್ ವಾಜ್, ಬ್ಲೇಜಿ ಸಿಕ್ವೇರಾ ಇತರರು ಇದ್ದರು.