ಕ್ರಿಕೆಟ್ ಪಂದ್ಯಾವಳಿ

cricket-bat-ball-26560801.jpg
Published on

ಹುಬ್ಬಳ್ಳಿ: ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಅಂಗವಾಗಿ ಶ್ರೀ ಭುವನೇಶ್ವರಿ ಸೇವಾ ಸಂಘದಿಂದ ಇಲ್ಲಿನ ಹೆಗ್ಗೇರಿಯ ಡಾ. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಏ. 26 ರಿಂದ 29ರವರೆಗೆ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ.

ಪ್ರಥಮ ಬಹುಮಾನ 1,00,001 ರೂ., ದ್ವಿತೀಯ ಬಹುಮಾನ 50,001ರೂ. ನೀಡಲಾಗುತ್ತದೆ. ಪ್ರತಿ ಪಂದ್ಯದಲ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿ ನೀಡಲಾಗುವುದು. 20ಕ್ಕೂ ಅಧಿಕ ಸ್ಥಳೀಯ ತಂಡಗಳ ಜತೆಗೆ ಉಡುಪಿ, ದಾವಣಗೆರೆ, ಬೆಂಗಳೂರು, ಖಾನಾಪುರ ಹಾಗೂ ಇನ್ನಿತರೆಡೆಯಿಂದಲೂ ತಂಡಗಳು ಭಾಗವಹಿಸಲಿವೆ ಎಂದು ಸಂಘದ ಕಾರ್ಯದರ್ಶಿ ಮಂಜುನಾಥ ಚಲವಾದಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net