ಕೀಲು, ಮೂಳೆ ತಜ್ಞರ ಕ್ರಿಕೆಟ್ ಪಂದ್ಯಾವಳಿ

Cricket
Published on

ಮೈಸೂರು ಕೀಲು, ಮೂಳೆ ತಜ್ಞರ ಸಂಘದ ವತಿಯಿಂದ ಸೆ.8ರಿಂದ 10ರವರೆಗೆ ಮೈಸೂರು ವಿವಿ ಸ್ಪೋರ್ಟ್ಸ್ ಪೆವಿಲಿಯನ್ ಮೈದಾನದಲ್ಲಿ ‘ರಾಜ್ಯ ಮಟ್ಟದ ಕೀಲು, ಮೂಳೆ ತಜ್ಞರ ಪ್ರೀಮಿಯರ್ ಲೀಗ್’ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಸಂಘದ ಜಂಟಿ ಕಾರ್ಯದರ್ಶಿ ಡಾ.ಎಸ್. ರಘುನಂದನ್ ತಿಳಿಸಿದರು.

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಕೀಲು, ಮೂಳೆ ತಜ್ಞರ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ. ತಲಾ 10 ಓವರ್‌ಗಳ ಪಂದ್ಯಾವಳಿಯಲ್ಲಿ ರಾಜ್ಯದ ನಾನಾ ಕಡೆಗಳಿಂದ 120ಕ್ಕೂ ಹೆಚ್ಚು ತಂಡಗಳು ಪಾಲ್ಗೊಳ್ಳಲಿವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಯದರ್ಶಿ ಡಾ.ಶ್ರೇಯಸ್ ಆಳ್ವ, ಪದಾಧಿಕಾರಿ ಡಾ.ಸುಧೀಂದ್ರ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net