ಹಾದ್ರೀಪುರದಲ್ಲಿ ಕ್ರಿಕೆಟ್ ಪಂದ್ಯಾವಳಿ

cricket
Published on

ಮಧುರೆ: ಇದೇ ಮೊದಲ ಬಾರಿಗೆ ದೊಡ್ಡಬಳ್ಳಾಪುರ ತಾಲೂಕಿನ ಹಾದ್ರೀಪುರ ಗ್ರಾಮದಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಯಿತು. ಗ್ರಾಮದ ಯುವಕರೆಲ್ಲಾ ಸೇರಿ ಟೂರ್ನಮೆಂಟ್ ಆಯೋಜಿಸಿದ್ದರು. ಎರಡು ದಿನ ಟೂರ್ನಮೆಂಟ್‌ನಲ್ಲಿ 50 ಆಟಗಾರರು ಭಾಗವಹಿಸಿದ್ದರು. ಭಜರಂಗಿ, ಜೈಭೀಮ್, ರಾಯಲ್ ಸ್ಟ್ರಾಂಗ್, ಎಬಿಡಿ, ಚೇಸಿಂಗ್ ಕಿಂಗ್ಸ್ ತಂಡಗಳು ಭಾಗವಹಿಸಿದ್ದವು.

ಯುವಕರಿಗೆ ಪ್ರೋತ್ಸಾಹ: ಗ್ರಾಮದ ಪ್ರತಿ ಯುವಕರನ್ನು ಸೇರಿಸಿಕೊಂಡು ಆಟ ಆಡಲಾಯಿತು. ಐಪಿಎಲ್ ಮಾದರಿಯಲ್ಲಿ ಆಟಗಾರರನ್ನು ಆಯ್ಕೆ ಮಾಡಲಾಯಿತು. ಯುವಕರಿಗೆ ಚಿಕ್ಕವಯಸ್ಸಿನಲ್ಲಿಯೇ ಕ್ರೀಡೆಯ ಬಗ್ಗೆ ಉತ್ಸಾಹ ಬರುವಂತೆ ಪ್ರೋತ್ಸಾಹ ನೀಡಲಾಯಿತು. ಪ್ರಮುಖವಾಗಿ ಗ್ರಾಮೀಣ ಭಾಗದಲ್ಲಿ ಕ್ರೀಡೆಗೆ ಪ್ರೋತ್ಸಾಹ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ಈರೀತಿಯ ಕ್ರೀಡೆಗಳ ಆಯೋಜನೆ ಅವಶ್ಯಕವಾಗಿದೆ ಎಂದು ಗ್ರಾಮದ ಮುಖಂಡರು ತಿಳಿಸಿದರು.5 ತಂಡಗಳ ನೇರ ಹಣಾಹಣಿಯಲ್ಲಿ ರಾಯಲ್ಸ್ಟ್ರಾಂಗ್ ಬಾಯ್ಸ್ ವಿಜೇತರಾದರು, ಎಬಿಡಿ ಸ್ಟೈಕರ್ಸ್‌ ತಂಡ ದ್ವಿತೀಯ ಸ್ಥಾನ ಪಡೆದು ಟೂರ್ನಿಗೆ ತೆರೆ ಎಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net