ಕ್ರೀಡೆಯಲ್ಲಿ ಭಾಗವಹಿಸುವಿಕೆ ಮುಖ್ಯ

ಕ್ರಿಕೆಟ್ ಪಂದ್ಯಾವಳಿ
ಕ್ರಿಕೆಟ್ ಪಂದ್ಯಾವಳಿ
Published on

ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
ಸೋಲು-ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಸೋಲು-ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ವಹ್ನಿಕುಲ ಕ್ಷತ್ರೀಯ ತಿಗಳರ ಸಂಘದ ಅಧ್ಯಕ್ಷ ಯಲಹಂಕ ಕೃಷ್ಣಮೂರ್ತಿ ಹೇಳಿದರು.
ದೇವನಹಳ್ಳಿ ಪಟ್ಟಣದಲ್ಲಿ ಮೌಕ್ತಿಕಾಂಭ ದೇವಾಯಲದಿಂದ ಆಯೋಜಿಸಿದ್ದ ವಹ್ನಿಕುಲ ಕ್ಷತ್ರೀಯ ಪ್ರೀಮಿಯರ್ ಲೀಗ್ ತಾಲೂಕು ಕ್ರಿಕೆಟ್ ಪಂದ್ಯಾವಳಿಯ ವಿಜೇತ ತಂಡಕ್ಕೆ ದೇವಾಲಯ ಆವರಣದ ಬಳಿ ಕಪ್ ಬಹುಮಾನ ವಿತರಣೆ ಮಾಡಿ ಮಾತನಾಡಿದರು.
ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಅವರಲ್ಲಿರುವ ಪ್ರತಿಭೆ ಹೊರಹೊಮ್ಮಲು ಸಹಕಾರಿಯಾಗುತ್ತದೆ. ಗ್ರಾಮೀಣ ಭಾಗಗಳಲ್ಲಿ ಇಂತಹ ಪಂದ್ಯಾವಳಿಗಳನ್ನು ನಡೆಸುವುದರಿಂದ ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಡುವಂತಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಯುವಕರು ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಅದರಿಂದ ಹೊರಬರಬೇಕಾದರೆ ಕ್ರೀಡೆಗಳಲ್ಲಿ ಪಾಲ್ಗೊಂಡಾಗ ಮಾತ್ರ ಸಾಧ್ಯ. ವಹ್ನಿರಾಯ ವಾರಿಯರ್ಸ್ ತಂಡದವರು ಪ್ರಥಮ ಮತ್ತು ದೇವನಹಳ್ಳಿ ಧರ್ಮರಾಯಸ್ವಾಮಿ ವಾರಿಯರ್ಸ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.
ತಾಲೂಕಿನಿಂದ ಒಟ್ಟು 10 ತಂಡಗಳ ಪೈಕಿ ಅಂತಿಮವಾಗಿ ದೇವನಹಳ್ಳಿಯ ವಹ್ನಿರಾಯ ವಾರಿಯರ್ಸ ಹಾಗೂ ಧರ್ಮರಾಯಸ್ವಾಮಿ ವಾರಿಯರ್ಸ ಯುವಕರ ತಂಡ ಫೈನಲ್‌ನಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದು ವಿಜೇತರಾಗಿದ್ದಾರೆ. ವಿಜೇತ ತಂಡಗಳಿಗೆ ಪ್ರಥಮ ಬಹುಮಾನವಾಗಿ 40 ಸಾವಿರ ರೂ. ನಗದು, ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ 25 ಸಾವಿರ ನಗದು ಮತ್ತು ಆಕರ್ಷಕ ಟೋಫಿ ನೀಡಿ ಪ್ರೋತ್ಸಾಹಿಸಲಾಗಿದೆ ಎಂದು ಪುರಸಭೆ ಸದಸ್ಯ ಎಸ್.ಸಿ ಚಂದ್ರಪ್ಪ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net