

ಮಡಿಕೇರಿ: ಚಿಲ್ ಬಾಯ್ಸ ಮಡಿಕೇರಿ ಹಾಗೂ ಕೊಡಗು ಮುಸ್ಲಿಂ ಸ್ಫೋರ್ಟ್ಸ್ ಟ್ರಸ್ಟ್ ಇವರ ಆಶ್ರಯದಲ್ಲಿ ಕಳೆದ ಒಂದು ವಾರಗಳಿಂದ ಮಡಿಕೇರಿ ನಗರದ ಕೆ.ಎಸ್.ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ೨೦ನೇ ವರ್ಷದ ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕುಶಾಲನಗರ ತಾಜ್ ತಂಡ ಚಾಂಪಿಯನ್ ಪ್ರಶಸ್ತಿಯನ್ನು ಅಲಂಕರಿಸಿದೆ. ರನ್ನರ್ಸ್ ಪ್ರಶಸ್ತಿಯನ್ನು ಫ್ರೀಡಂ ಬಾಯ್ಸ ಹುಂಡಿ ತಂಡವು ಪಡೆದುಕೊಂಡಿತು.
ಫೈನಲ್ ಪಂದ್ಯದಲ್ಲಿ ಮೊದಲು ಟಾಸ್ ಸೋತು ಬ್ಯಾಟ್ ಮಾಡಿದ ತಾಜ್ ಕುಶಾಲನಗರ ತಂಡ ನಿಗದಿತ ಆರು ಓವರ್‌ಗಳಲ್ಲಿ ೪೯ ರನ್ ಗಳಿಸಿತು. ೫೦ ರನ್‌ಗಳ ಗುರಿ ಬೆನ್ನಟ್ಟಿದ ಫ್ರೀಡಂ ಬಾಯ್ಸ ಕೊನೆಯ ಕ್ಷಣದವರೆಗೂ ಹೋರಾಟ ನಡೆಸಿ ೪೦ ರನ್ ಗಳಿಸಲಷ್ಟೇ ಶಕ್ತರಾದರು. ಅಂತಿಮವಾಗಿ ತಾಜ್ ಕುಶಾಲನಗರ ತಂಡ ೯ ರನ್‌ಗಳ ಅಂತರದಿಂದ ಗೆಲುವು ಸಾಧಿಸಿ, ೨೦ನೇ ವರ್ಷದ ಮುಸ್ಲಿಂ ಕಪ್ ಕ್ರಿಕೆಟ್ ಚಾಂಪಿಯನ್ ಪ್ರಶಸ್ತಿಯನ್ನು ಅಲಂಕರಿಸಿತು. ಫೈನಲ್ ಪಂದ್ಯದ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ತಾಜ್ ಕುಶಾಲನಗರ ತಂಡದ ತಶ್ರೀಫ್ ಪಡೆದುಕೊಂಡರು.
ಇದಕ್ಕೂ ಮೊದಲು ನಡೆದ ಪ್ರಥಮ ಸೆಮಿಫೈನಲ್ ಪಂದ್ಯದಲ್ಲಿ ಫ್ರೀಡಂ ಬಾಯ್ಸ ಹುಂಡಿ ತಂಡ ಕೈವೈಸಿಸಿ ತಂಡದ ವಿರುದ್ಧ ಗೆಲುವು ಸಾಧಿಸಿತು. ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಆ್ಯಶಸ್ ಗೋಣಿಕೊಪ್ಪ ವಿರುದ್ಧ ತಾಜ್ ಕುಶಾಲನಗರ ತಂಡ ಗೆಲುವು ಸಾಧಿಸಿ ಫೈನಲ್ ಪ್ರವೇಶ ಪಡೆಯಿತು. ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಆ್ಯಶಸ್ ಗೋಣಿಕೊಪ್ಪ ತಂಡ ಕೆವೈಸಿಸಿ ಕಡಂಗ ತಂಡವನ್ನು ಮಣಿಸಿತು.
ವೈಯುಕ್ತಿಕ ಬಹುಮಾನಗಳ ವಿವರ: ಬೆಸ್ಟ್ ಟೀಂ ಹಾರ್ಡ್ ಹಿಟ್ಟರ್ ಕಾಗಡಿಕಟ್ಟೆ, ಮ್ಯಾನ್ ಆಫ್ ದಿ-ಸೀರಿಯಸ್ ಫ್ರೀಡಂ ಬಾಯ್ಸ ತಂಡದ ರಿಯಾಸ್ ಇಯ್ಯ, ಬೆಸ್ಟ್ ಬ್ಯಾಟ್ಸ್‌ಮನ್ ತಾಜ್ ತಂಡದ ಅಲೀಂ ಕುಶಾಲನಗರ, ಬೆಸ್ಟ್ ಬೌಲರ್ ಫ್ರೀಡಂ ಬಾಯ್ಸ ತಂಡದ ಶಂಸು ಹುಂಡಿ,
ಲೆಜೆಂಡ್ ಪ್ಲೇಯರ್ ಸಲಾಂ ಬೇತ್ರಿ, ಎಮೆರ್ಜಿಂಗ್ ಪ್ಲೇಯರ್ ಸುಹಾನ್ ಮೆಹಕ್ ಕುಶಾಲನಗರ, ಬೆಸ್ಟ್ ಫೀಲ್ಡರ್ ಕಾಜಾ ತಾಜ್ ಕುಶಾಲನಗರ, ಬೆಸ್ಟ್ ಕ್ಯಾಚ್ ನಾಸಿರ್ ಕೂಡಿಗೆ, ಬೆಸ್ಟ್ ವಿಕೆಟ್ ಕೀಪರ್ ಹಾರಿಸ್ ಮಡಿಕೇರಿ, ಅತಿ ಹೆಚ್ಚು ಸಿಕ್ಸರ್ ರಿಯಾಸ್ ಇಯ್ಯ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷ ಅಮೀನ್ ಮೊಹಸ್ಸಿನ್, ಚಿಲ್ ಬಾಯ್ಸ ಅಧ್ಯಕ್ಷ ಉನೈಸ್ ಮಡಿಕೇರಿ, ಕೊಡಗು ಮುಸ್ಲಿಂ ಸ್ಫೋರ್ಟ್ಸ್ ಟ್ರಸ್ಟ್ ಅಧ್ಯಕ್ಷ ಖಾದರ್, ಕಾನೂನು ಸಲಹೆಗಾರ ಸುಫಿಯಾನ್ ಮಡಿಕೇರಿ, ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಆದಂ ಕುಶಾಲನಗರ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್ ಮತ್ತಿತರರು ಇದ್ದರು.