Cricket p1ayer ವಿವಿಎಸ್‌ ಲಕ್ಷ್ಮಣ ಗೋಕರ್ಣಕ್ಕೆ ಭೇಟಿ

Cricket p1ayer
Published on

ಗೋಕರ್ಣ:ಮಾಜಿ ಕ್ರಿಕೆಟ್ ಆಟಗಾರ (Cricket p1ayer ) ವಿವಿಎಸ್ ಲಕ್ಷ್ಮಣ ಸಕುಟುಂಬದೊಂದಿಗೆ ಶುಕ್ರವಾರ ಇಲ್ಲಿಗೆ ಭೇಟಿಯಿತ್ತು ವಿವಿಧ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿದರು.

ಪುರಾಣ ಪ್ರಸಿದ್ಧ ಶ್ರೀಮಹಾಗಣಪತಿಗೆ ಮೊದಲ ಅರ್ಚನೆ ಕೈಗೊಂಡ ಅವರು ನಂತರ ಶ್ರೀಮಹಾಬಲೇಶ್ವರ ಮಂದಿರದಲ್ಲಿ ಆತ್ಮಲಿಂಗಕ್ಕೆ ಮಹಾಮಂಗಳಾರತಿ ಸಹಿತ ನಾನಾ ಸೇವೆ ಸಲ್ಲಿಸಿದರು.

ಶ್ರೀಮಂದಿರದ ವತಿಯಿಂದ ಸ್ಮರಣಿಕೆಯಿತ್ತು ಅವರನ್ನು ಗೌರವಿಸಲಾಯಿತು.ಶ್ರೀಪಾರ್ವತಿ ಮಂದಿರ ಸಂದರ್ಶಿಸಿದ ಅವರು ಕುಂಕುಮಾರ್ಚನೆ, ಪ್ರಾರ್ಥನೆ ಸಲ್ಲಿಸಿದರು.ತರುವಾಯ ಕ್ಷೇತ್ರ ಪುರೋಹಿತ ವೇ.ಬದ್ರಿನಾರಾಯಣ ನೃಸಿಂಹ ಅಡಿ ನೇತೃತ್ವದಲ್ಲಿ ಪಿತೃಸ್ಥಾಲೀಶ್ವರ ಸನ್ನಿಧಿಯಲ್ಲಿ ಪಿತೃಗಳ ಪ್ರೀತ್ಯರ್ಥ ಕರ್ಮಾಂಗಗಳನ್ನು ಕೈಗೊಂಡರು.

ಇದನ್ನೂ ಓದಿ: https://www.vijayavani.net/leopard-death

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net