ಐಕ್ಯ, ಸೌಹಾರ್ದಕ್ಕೆ ಕ್ರೀಡೆ ಪ್ರೇರಕ : ಸತೀಶ್ ಜಾರಕಿಹೊಳಿ ಅನಿಸಿಕೆ

New Project (7)
Published on

ಉಪ್ಪಿನಂಗಡಿ: ಕ್ರೀಡೆ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ವೃದ್ಧಿಗೊಳಿಸುವುದರ ಜೊತೆಗೆ ಊರಿನ ಐಕ್ಯ, ಸೌಹಾರ್ದವನ್ನು ಎತ್ತಿ ಹಿಡಿಯುವ ಮತ್ತು ಈ ನೆಲೆಯಲ್ಲಿ ಎಲ್ಲರನ್ನೂ ಒಂದುಗೂಡಿಸುವ ಶಕ್ತಿ ಕ್ರೀಡೆಗೆ ಇದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಉಪ್ಪಿನಂಗಡಿಯಲ್ಲಿ ಉಬಾರ್ ಡೋನರ್ಸ್‌ ವತಿಯಿಂದ ನಡೆದ ಆಹ್ವಾನಿತ ತಂಡಗಳ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಸಮಾಜ ಸೇವೆ ಪ್ರತಿಯೊಬ್ಬ ಮನುಷ್ಯನ ಜವಾಬ್ದಾರಿ. ಅದನ್ನು ಉಪ್ಪಿನಂಗಡಿಯ ಯುವಕರು ಜಾತಿ-ಧರ್ಮ-ಮತಗಳ ಭೇದವನ್ನು ಮರೆತು ಮಾಡುತ್ತಿದ್ದಾರೆ. ಈ ರೀತಿಯ ಮಾನವೀಯ ಸೇವೆಗಳನ್ನು ಮುಂದುವರಿಸಿ ನಿಮ್ಮೊಂದಿಗೆ ನಾನು ಮತ್ತೆ ಶಾಸಕರು ಸದಾ ಇದ್ದೇವೆ ಎಂದು ಭರವಸೆಯನ್ನಿತ್ತರು.

ಸಮಾರೋಪಕ್ಕೆ ಮುನ್ನ ಸಚಿವರು ಬ್ಯಾಟ್ ಹಿಡಿದು ಆಡಿದರು. ಶಾಸಕ ಅಶೋಕ್ ಕುಮಾರ್ ರೈ ಬೌಲಿಂಗ್ ಮಾಡಿದ್ದರು. ಉಬಾರ್ ಡೋನರ್ಸ್‌ ಸಂಸ್ಥೆಯ ಅಧ್ಯಕ್ಷ ಶಬ್ಬೀರ್ ಕೆಂಪಿ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ನಿವೃತ್ತಿ ಶಿಕ್ಷಕ ವಿನ್ಸೆಂಟ್ ಫರ್ನಾಂಡಿಸ್, ಬೆಳ್ತಂಗಡಿಯ ರಕ್ಷಿತ್ ಶಿವರಾಮ್, ರೆಸ್ಕ್ಯೂ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಜಬ್ಬಾರ್ ಮಾರಿಪಳ್ಳ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ಸಿನ ಮಿಥುನ್ ರೈ, ಹೇಮನಾಥ ಶೆಟ್ಟಿ, ಎಂಎಸ್ ಮಹಮ್ಮದ್, ಶಾಹುಲ್ ಕೆಕೆ., ಸುಹೈಲ್ ಕಂದಕ್, ಗಿರೀಶ್ ಆಳ್ವಾ, ಇಬ್ರಾಹಿಂ ನವಾಝ್ ಬಡಕಬೈಲು, ಯು.ಟಿ.ತೌಷಿಪ್, ಡಾ.ರಾಜಾರಾಮ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net