

ಮಳವಳ್ಳಿ: ತಾಲೂಕಿನ ಕ್ಯಾತನಹಳ್ಳಿ ಗ್ರಾಮದಲ್ಲಿ ಹೆಬ್ಬಳದ ಅರಸಮ್ಮ ದೇವಿ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಎರಡು ದಿನಗಳ ಕ್ರಿಕೆಟ್ ಲೀಗ್ ಪಂದ್ಯಾವಳಿಯಲ್ಲಿ ಕ್ಯಾತನಹಳ್ಳಿ ಬ್ಲೂ ಬಾಯ್ಸ ಬಿ ತಂಡ ಪ್ರಥಮ ಸ್ಥಾನ ಪಡೆಯಿತು.ಗೆಲುವಿಗಾಗಿ ತೀವ್ರ ಸೆಣಸಾಟ ನಡೆಸಿದ್ದ ಬ್ಲೂ ಬಾಯ್ಸ ಎ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ಪಂದ್ಯಾವಳಿಯಲ್ಲಿ ಕ್ಯಾತನಹಳ್ಳಿ ಸೇರಿದಂತೆ ಸುತ್ತಲಿನ ಗ್ರಾಮಗಳ 10 ತಂಡಗಳು ಭಾಗಿಯಾಗಿದ್ದವು. ಸೋಮವಾರ ಹಮಿಕೊಂಡಿದ್ದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಕ್ಯಾತನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್. ಆರ್. ರಾಜೇಶ್, ಗ್ರಾಮ ದೇವತೆ ಹಬ್ಬದ ಸಂದರ್ಭ ಕ್ರೀಡಾಕೂಟವನ್ನೂ ನಡೆಸುವುದು ಪರಂಪರೆಗೆ ಮತ್ತಷ್ಟು ಮೆರುಗು ತಂದಿದೆ ಎಂದರು.ಗ್ರಾಮದ ಸೊಸೈಟಿ ಉಪಾಧ್ಯಕ್ಷ ಎಸ್. ನಾರಾಯಣ, ಗ್ರಾಪಂ ಕರ ಸಂಗ್ರಹಕಾರ ಸತೀಶ್, ಪಂದ್ಯಾವಳಿ ಆಯೋಜನೆ ತಂಡದ ಮುಖ್ಯಸ್ಥ ನಟರಾಜು, ಮುಖಂಡರಾದ ಮನೋಜ್, ಶಕ್ತಿ ಮಕಾನಿ, ಅರುಣ್ ಇತರರು ಇದ್ದರು.