ಸ್ವರ್ಣ ಕಪ್ ಕ್ರಿಕೆಟ್ ಫೆಸ್ಟ್

IMG_20240325_212006_512.jpg
Published on

ಹುಬ್ಬಳ್ಳಿ: ಇಲ್ಲಿಯ ಫೋಟೋ ಹಾಗೂ ವಿಡಿಯೋಗ್ರಾಫರ್ ಅಸೋಸಿಯೇಷನ್ ವತಿಯಿಂದ ಸ್ವರ್ಣ ಕಪ್ ಕ್ರಿಕೆಟ್ ಫೆಸ್ಟ್ ಅಂತರ್ ವಲಯ ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಾಮೆಂಟ್ ಮಾ. 26ರಿಂದ ಆಯೋಜಿಸಲಾಗಿದೆ.

ನಗರದ ನೆಹರು ಕ್ರೀಡಾಂಗಣದಲ್ಲಿ ಏರ್ಪಡಿಸಿರುವ ಪಂದ್ಯಾವಳಿಗೆ ಮಾ. 26ರಂದು ಬೆಳಗ್ಗೆ 9.30ಕ್ಕೆ ಸ್ವರ್ಣ ಸಮೂಹ ಸಂಸ್ಥೆಯ ಎಂಡಿ ಡಾ. ವಿಎಸ್ವಿ ಪ್ರಸಾದ ಚಾಲನೆ ನೀಡುವರು. ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ, ಸಮಾಜ ಸೇವಕ ವೆಂಕಟೇಶ ಕಾಟವೆ ಅತಿಥಿಗಳಾಗಿ ಪಾಲ್ಗೊಳ್ಳುವರು. ಸಂಘದ ಅಧ್ಯಕ್ಷ ಕಿರಣ ಬಾಕಳೆ ಅಧ್ಯಕ್ಷತೆ ವಹಿಸುವರು.

ಮಾ. 27ರಂದು ಸಂಜೆ 5ಕ್ಕೆ ಸಮಾರೋಪ ನಡೆಯಲಿದ್ದು, ಜಿಲ್ಲಾಧಿಕಾರಿ ದಿವ್ಯ ಪ್ರಭು ಅತಿಥಿಗಳಾಗಿ ಭಾಗವಹಿಸುವರು.

ಸಂಘದ ಸದಸ್ಯರಿಗೆ ಆರೋಗ್ಯಕರ ವಾತಾವರಣ ನಿಮಿರ್ಸಲು ಒಟ್ಟು ಆರು ತಂಡ ರಚಿಸಿ ಟೂನಿರ್ ನಡೆಸಲಾಗುತ್ತಿದೆ. ವಿಜೇತರಿಗೆ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುತ್ತಿದೆ ಎಂದು ಸಂಘದ ಕಾರ್ಯದರ್ಶಿ ರವೀಂದ್ರ ಕಾಟಿಗರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net