ಕ್ರಿಕೆಟ್: ಚಕ್ರವರ್ತಿ ಬಂಟ್ಸ್ ಚಾಂಪಿಯನ್ಸ್

news6
Published on

ಮಡಿಕೇರಿ: ಮೂರ್ನಾಡು ಹೋಬಳಿ ಬಂಟರ ಸಂಘದ ವತಿಯಿಂದ ನಡೆದ ಸ್ವಜಾತಿ ಬಂಧುಗಳ ಸಮ್ಮಿಲನ-೨೦೨೩ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಡಿಕೇರಿಯ ಚಕ್ರವರ್ತಿ ಬಂಟ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.


ಮೂರ್ನಾಡು ಕಾಲೇಜು ಮೈದಾನದಲ್ಲಿ ನಡೆದ ಪೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಚಕ್ರವರ್ತಿ ತಂಡ ನಿಗದಿತ ೬ ಓವರ್‌ಗೆ ನಾಲ್ಕು ವಿಕೆಟ್ ಕಳೆದುಕೊಂಡು ೫೯ ರನ್‌ಗಳಿಸಿತು. ೬೦ ರನ್ ಗುರಿ ಬೆನ್ನತ್ತಿದ ಎನ್.ಪಿ.ಬಂಟ್ ವಾರಿಯರ್ಸ್ ಕುಂಜಿಲಗೇರಿ ತಂಡ ೬ ಓವರ್‌ಗೆ ೩೨ ರನ್‌ಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡು ರನ್ನರಪ್ ಪ್ರಶಸ್ತಿಗೆ ತೃಪ್ತಿಪಟ್ಟಿತು.


ಸೆಮಿಫೈನಲ್‌ನಲ್ಲಿ ಟೀಂ ವಿರಾಟ್ ತಂಡವನ್ನು ೨೫ ರನ್ ಅಂತರದಿಂದ ಮಣಿಸಿ ಚಕ್ರವರ್ತಿ ಬಂಟ್ಸ್ ಮಡಿಕೇರಿ ಫೈನಲ್‌ಗೆ ಅರ್ಹತೆ ಪಡೆಯಿತು. ಮತ್ತೊಂದು ಸೆಮಿಫೈನಲ್‌ನಲ್ಲಿ ಯಂಗ್ ಬಂಟ್ ಪ್ಯಾಂಥರ್ಸ್ ತಂಡವನ್ನು ೬ ವಿಕೆಟ್‌ನಿಂದ ಸೋಲಿಸಿ ಎನ್.ಪಿ.ಬಂಟ್ ವಾರಿಯರ್ಸ್ ಅಂತಿಮ ಪಂದ್ಯಕ್ಕೆ ಅವಕಾಶ ಗಿಟ್ಟಿಸಿತು.


ಅಂತಿಮ ಪಂದ್ಯದ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಚಕ್ರವರ್ತಿ ಬಂಟ್ಸ್ ತಂಡದ ನಿಖಿಲ್ ಆಳ್ವ ಪಂಡೆದುಕೊಂಡರೆ, ಪಂದ್ಯಾವಳಿ ಶ್ರೇಷ್ಠ ಆಟಗಾರನಾಗಿ ಯಂಗ್ ಬಂಟ್ ಪ್ಯಾಂಥರ್ಸ್ ಕೈಕೇರಿ ತಂಡದ ಗಗನ್ ಆಳ್ವ ಪಾಲಾಯಿತು. ಪುರುಷರ ವಿಭಾಗದ ಹಗ್ಗಜಗ್ಗಾಟದಲ್ಲಿ ಮಲ್ನಾಡ್ ಬಂಟ್ಸ್ ವಿರಾಜಪೇಟೆ(ಪ್ರ), ಗಂಗನ ಕುಟುಂಬ ಬೆಟ್ಟಗೇರಿ(ದ್ವಿ) ಬಹುಮಾನಗಳಿಸಿತು.


ಮಹಿಳೆಯರ ವಿಭಾಗದ ಥ್ರೋಬಾಲ್‌ನಲ್ಲಿ ಬಂಟ್ಸ್ ವಾರಿಯರ್ಸ್ ಮೂರ್ನಾಡು(ಪ್ರ), ಎನ್.ಪಿ.ಬಂಟ್ಸ್ ಕುಂಜಿಲಗೇರಿ(ದ್ವಿ), ಹಗ್ಗಜಗ್ಗಾಟದಲ್ಲಿ ಮಡಿಕೇರಿ ನಗರ ಮಹಿಳಾ ಘಟಕ(ಪ್ರ), ಬಂಟ್ಸ್ ವಾರಿಯರ್ಸ್ ಮೂರ್ನಾಡು(ದ್ವಿ), ನಿಂಬೆ ಚಮಚ ಓಟದಲ್ಲಿ ಬಿ.ಜೆ. ಸುಮಿತ್ರ ರೈ ಮೂರ್ನಾಡು(ಪ್ರ), ಚಿತ್ರ ರೈ(ದ್ವಿ) ಸ್ಥಾನ ಪಡೆದರು. ೧-೪ನೆ ತರಗತಿ ಮಕ್ಕಳ ವಿಭಾಗದ ಚಕ್ಕುಲಿ ಕಚ್ಚುವ ಸ್ಪರ್ಧೆಯಲ್ಲಿ ವಿಶಿಷ್ಠ್ ದಿನೇಶ್ ರೈ(ಪ್ರ), ಇತಿಶ್ರೀ ಸಚಿನ್ ರೈ(ದ್ವಿ) ಸ್ಥಾನ ಪಡೆದರು. ಅಂಗನವಾಡಿ ವಿಭಾಗದ ಕಾಳುಹೆಕ್ಕುವ ಸ್ಪರ್ಧೆಯಲ್ಲಿ ಕೃನಾಲ್ ಶೆಟ್ಟಿ(ಪ್ರ), ಗಾಯನ್ ಶೆಟ್ಟಿ(ದ್ವಿ), ೫-೭ನೆ ತರಗತಿ ವಿಭಾಗದ ಪಿರಮಿಡ್ ರಚನೆ(ಬಾಲಕರು), ಅನ್ಶುಲ್ ಜಯರಾಮ್ ರೈ(ಪ್ರ), ರೋಹನ್ ರಾಧಕೃಷ್ಣ ರೈ(ದ್ವಿ) ಸ್ಥಾನ ಪಡೆದರು. ಬಾಲಕಿಯರ ವಿಭಾಗದಲ್ಲಿ ಅಕ್ಷತಾ ಅಶ್ವತ್ಥ್ ರೈ(ಪ್ರ), ತನ್ಯ ಸತೀಶ್ ರೈ(ದ್ವಿ), ಪ್ರೌಢಶಾಲೆ ಬಾಲಕರ ವಿಭಾಗದ ೧೦೦ ಮೀ.ಓಟದಲ್ಲಿ ದಿಗಂತ್ ಅನಿಲ್ ಕುಮಾರ್ ರೈ(ಪ್ರ), ಅಖಿಲ್ ಜಯರಾಮ್ ರೈ(ದ್ವಿ), ಬಾಲಕಿಯರ ವಿಭಾಗದಲ್ಲಿ ರೋಶಿನಿ ಅಶೋಕ್ ಆಳ್ವ(ಪ್ರ), ಸೋನಿಕಾ ಸುಮತಿ ಶೆಟ್ಟಿ(ದ್ವಿ) ಸ್ಥಾನ ಪಡೆದರು.


ಒಳ್ಳೆಯ ಕಾರ್ಯಕ್ಕೆ ತೊಂದರೆ ಕೊಡಬೇಡಿ: ಜಗದೀಶ್ ರೈ
ಮೂರ್ನಾಡು: ಬಂಟರ ಸಂಘದ ಏಳಿಗೆಗಾಗಿ ಶ್ರಮಿಸಲು ಬದ್ಧನಾಗಿದ್ದು, ಒಳ್ಳೆಯ ಕಾರ್ಯದ ವಿಚಾರದಲ್ಲಿ ಯಾರೂ ತೊಂದರೆ ಕೊಡಬಾರದು ಎಂದು ಜಿಲ್ಲಾಧ್ಯಕ್ಷ ಬಿ.ಡಿ.ಜಗದೀಶ್ ರೈ ಅಭಿಪ್ರಾಯಪಟ್ಟರು.
ಮೂರ್ನಾಡು ಹೋಬಳಿ ಬಂಟರ ಸಂಘದ ವತಿಯಿಂದ ಎರಡು ದಿನ ಕಾಲ ಇಲ್ಲಿನ ಕಾಲೇಜು ಮೈದಾನದಲ್ಲಿ ನಡೆದ ಸ್ವಜಾತಿ ಬಂಧುಗಳ ಸಮ್ಮಿಲನ-೨೦೨೩ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಂಟರ ಸಂಘ ಹಾಗೂ ಸಮುದಾಯದ ಅಭಿವೃದ್ಧಿ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಹಾಕಿಕೊಕೊಳ್ಳಲಾಗಿದೆ. ಮುಂದಿನ ದಿನದಲ್ಲಿ ಒಂದೊಂದಾಗಿ ಕಾರ್ಯರೂಪಕ್ಕೆ ತರಲಾಗುವುದು. ಮುಖ್ಯವಾಗಿ ಬಂಟರ ಭವನ ನಿರ್ಮಾಣ ಕಾರ್ಯವನ್ನು ಶೀಘ್ರದಲ್ಲೇ ಆರಂಭಿಸಬೇಕೆಂಬ ಇರಾದೆ ಇದೆ. ಯಾರು ಕೂಡಾ ವಿನಾ ಕಾರಣ ಅಡ್ಡಗಾಲು ಹಾಕಬಾರದೆಂದು ಮನವಿ ಮಾಡಿದರು.
ಮೂರ್ನಾಡು ಹೋಬಳಿ ಘಟಕ ಅಧ್ಯಕ್ಷ ಬಿ.ಕೆ.ಚಂದ್ರಶೇಖರ ರೈ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಬಿ.ಬಿ.ಐತಪ್ಪ ರೈ, ರವೀಂದ್ರ ವಿ.ರೈ, ಅಶ್ವಿನಿ ಪುರುಷೋತ್ತಮ ರೈ, ಸುದೀಶ್ ರೈ, ರಮೇಶ್ ರೈ, ಜನಾರ್ದನ ಶೆಟ್ಟಿ, ದುಷ್ಯಂತ್ ರೈ, ರತ್ನಾಕರ ರೈ, ವಸಂತ ರೈ, ಬಿ.ಸಿ. ಹರೀಶ್ ರೈ, ಗಿರೀಶ್ ರೈ, ಸೌಮ್ಯ ಶೆಟ್ಟಿ, ಶರತ್ ಶೆಟ್ಟಿ, ಜಯಂತಿ ರೈ ವೇದಿಕೆಯಲ್ಲಿದ್ದರು.

ಸಾಧಕರಿಗೆ ಸನ್ಮಾನ
ವಿವಿಧ ಕ್ಷೇತ್ರದ ಸಾಧಕರಾದ ಡಾ.ಹೇಮಂತ್ ಕುಮಾರ್, ಬಾಬ ಅರುಣ್ ರೈ, ಬಿ.ಕೆ.ಸುರೇಶ್ ರೈ, ಸುಮತಿ ಶೆಟ್ಟಿ, ಜಿತೇಂದ್ರ ರೈ, ಜಯಂತಿ ಲವ ರೈ, ಪ್ರೇಮಲತಾ ಶೆಡ್ತಿ, ಕಿಶೋರ್ ರೈ ಕತ್ತಲೆಕಾಡು ಅವರನ್ನು ಸನ್ಮಾನಿಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮ: ಮಂಗಳೂರಿನ ಮಸ್ಕಿರಿ ಕುಡ್ಲ ತಂಡದ ಕಾಮಿಡಿ ಕಚಗುಳಿ ವಿಶೇಷ ಆಕರ್ಷಣೆಯಾಗಿ ರಂಜಿಸಿದೆ. ಖ್ಯಾತ ಕಲಾವಿದರಾದ ದೀಪಕ್ ರೈ ಪಾಣಾಜೆ, ಜೆ.ಪಿ.ತೂಮಿನಾಡು, ಪ್ರಕಾಶ್ ತೂಮಿನಾಡು, ರಾಜೇಶ್ ಮುಗುಳಿ ಮನೋಜ್ಞ ಅಭಿನಯದ ಮೂಲಕ ನೆರೆದಿದ್ದವರನ್ನು ನಗೆಗಡಲಿನಲ್ಲಿ ತೇಲಿಸಿದರು. ಇದರೊಂದಿಗೆ ಸಮಾಜದ ಯುವ ಪ್ರತಿಭೆಗಳು ನೃತ್ಯ, ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net