ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ಓರ್ವ ಆರೋಪಿ ಬಂಧನ

Crime Logo
Published on

ರಾಣೆಬೆನ್ನೂರ: ಇಲ್ಲಿಯ ಕೋಟೆ ಓಣಿಯಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ಓರ್ವನನ್ನು ಸೈಬರ್ ಕ್ರೈಂ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ನಗರದ ಮಜದಖಾನ್ ಚಮನಖಾನ ಸೌದಾಗರ (46) ಬಂಧಿತ ಆರೋಪಿ.
ಈತ ನಗರದ ಕೋಟೆ ಓಣಿಯಲ್ಲಿ ಕೆಕೆಆರ್ ಮತ್ತು ಎಸ್‌ಆರ್‌ಎಚ್ ಐಪಿಎಲ್ ಕ್ರಿಕೆಟ್ ಆಟದ ಮೇಲೆ ಬೆಟ್ಟಿಂಗ್ ಆಡುತ್ತಿದ್ದ. ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ಕುರಿತು ಹಾವೇರಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net