

ರಾಚಯ್ಯ ಸ್ವಾಮಿ ಮಾಚನೂರು
ರಾಯಚೂರು ಮಟ್ಕ,ಜೂಜೂ ಮಾತ್ರ ಜಿಲ್ಲೆಯಲ್ಲಿ ರಾಜಾರೋಷವಾಗಿ ನಡೆಯುತ್ತಿತ್ತು. ಆದರೆ ಇತ್ತಿಚ್ಚಿಗೆ ಆನ್‌ಲೈನ್ ಬೆಟ್ಟಿಂಗ್ ಗೇಮï ಹಾಗೂ ಐಪಿಎಲï ಕ್ರಿಕೆಟï ಬೆಟ್ಟಿಂಗï ದಂಧೆ ಕೂಡ ವ್ಯಾಪಕವಾಗಿ ನಡೆಯುತ್ತಿದ್ದು, ಇದರಿಂದ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡು ಜನರು ಬದುಕು ಹಾಳು ಮಾಡಿಕೊಳ್ಳಲು ಕಾರಣವಾಗುತ್ತಿದೆ. ಜಿಲ್ಲಾ ಪೊಲೀಸ್ ಇಲಾಖೆಯಿಂದ ಕಳೆದ ಮೂರು ತಿಂಗಳಲ್ಲಿ ೨೮ ಪ್ರಕರಣಗಳು ದಾಖಲು ಮಾಡಲಾಗಿದೆ.
ಐಪಿಎಲï ಬೆಟ್ಟಿಂಗ್‌ನಲ್ಲಿ ಹಣ ಗಳಿಸುವ ಆಸೆಗೆ ಬಿದ್ದು ಜಿ¯್ಲೆಯ ಜನರು ಲಕ್ಷಾಂತರ ರೂಪಾಯಿ ಮೋಸ ಹೋಗುತ್ತಿz್ದÁರೆ. ಐಪಿಎಲï ಬೆಟ್ಟಿಂಗ್ ಆನ್‌ಲೈನï ಮೂಲಕವೂ ನಡೆಯುತ್ತಿದ್ದು, ಹಣ ಕಳೆದುಕೊಂಡವರ ಬದುಕು ಬೀದಿ ಪಾಲಾಗುವಂತೆ ಮಾಡಿದೆ. ಬೆಟ್ಟಿಂಗ್‌ನಲ್ಲಿ ಹಣ ಕಳೆದುಕೊಂಡು ಸಾಲ ಮಾಡುವ ಹಾಗೂ ಸಾಲ ಮಾಡಿಯೂ ಬೆಟ್ಟಿಂಗï ಕಟ್ಟುವ ಹಣ ಕಳೆದುಕೊಂಡು ಸಂಕಷ್ಟಕ್ಕೀಡಾಗುವ ಪ್ರಸಂಗಗಳು ನಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದ್ದು, ಬೆಟ್ಟಿಂಗ್ ಭೂತದಿಂದ ಕೆಲವರು ಊರು ಬಿಟ್ಟಿರುವ ನಿದರ್ಶನಗಳ ಆಗುತ್ತಿವೆ.
ಐಪಿಎಲï ಕ್ರಿಕೆಟï ಟೂರ್ನಮೆಂಟï ಹೆಸರಲ್ಲಿ ಜನರಿಗೆ ಮೋಸ ಮಾಡಲು ಸಾಕಷ್ಟು ಕುತಂತ್ರಗಳು ನಡೆಯುತ್ತಿದ್ದು, ಜನರಿಗೆ ತಿಳಿದು ಅಥವಾ ತಿಳಿಯದೆಯೂ ಈ ಬೆಟ್ಟಿಂಗ್ ಜÁಲದ ಬಲೆಗೆ ಬೀಳುತ್ತಿz್ದÁರೆ. ಕಾನೂನಿನ ಭಯವಿಲ್ಲದೆ ಬೆಟ್ಟಿಂಗï ದಂಧೆ ನಡೆಸುತ್ತಿರುವ ದಂಧೆಕೋರರಿಗೆ ಹಣ ಮಾಡುವುದೇ ಟಾರ್ಗೆಟï ಆಗಿದೆ. ಆದರೆ, ಜನರು ಇದರ ಬಗ್ಗೆ ಇನ್ನೂ ಜÁಗೃತರಾಗುತ್ತಿಲ್ಲ. ಸುಲಭವಾಗಿ ಬೆಟ್ಟಿಂಗ್ ಕೂಪಕ್ಕೆ ಸಿಲುಕಿ ಹಣ ಕಳೆದುಕೊಳ್ಳುತ್ತಿರುವ ನಿದರ್ಶನಗಳು ಹೆಚ್ಚುತ್ತಿರುವುದು ಕಳವಳ ಮೂಡಿಸಿದೆ.
ಎಷ್ಟು ಪ್ರಕರಣಗಳು ದಾಖಲು
ಜಿ¯್ಲÉಯಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಐಪಿಎಲï ಕ್ರಿಕೆಟï ಬೆಟ್ಟಿಂಗ್ ಹೆಸರಿನಲ್ಲಿ ಜನರಿಗೆ ಮೋಸ ಮಾಡಿ ಬೆಟ್ಟಿಂಗï ಬಲೆಗೆ ಬೀಳಿಸುವ ದಂಧೆಕೋರರನ್ನು ಪೊಲೀಸರು ಎಡೆಮೂರಿ ಕಟ್ಟುತ್ತಿದ್ದಾರೆ. ಕಳೆದ ಮೂರು ತಿಂಗಳಲ್ಲಿ ಐಪಿಎಲï ಬೆಟ್ಟಿಂಗ್‌ನಲ್ಲಿ ಒಟ್ಟು ೨೮ ಪ್ರಕರಣಗಳು ದಾಖಲಾಗಿವೆ. ಈ ಪೈಕಿ -Éಬ್ರವರಿ ತಿಂಗಳಲ್ಲಿ ೦೩ ಪ್ರಕರಣಗಳ ಪೈಕಿ ೦೪ ಜನರ ಬಂಧನ ಮಾಡಿ ಆರೋಪಿಗಳಿಂದ ೧೦,೭೦೦ ನಗದು ಹಣ ಒಂದು ಮೊಬೈಲ್ ಜಪ್ತಿ ಮಾಡಲಾಗಿದೆ. ಮಾರ್ಚ್ ತಿಂಗಳಲ್ಲಿ ೦೮ ಪ್ರಕರಣಗಳ ಪೈಕಿ ೧೦ ಜನರ ಬಂಧನ ಮಾಡಿದ್ದು,೧೪೪೦೦ ರೂ ನಗದು ಹಣ ೦೮ ಮೊಬೈಲ್ ಜಪ್ತಿ ಮಾಡಲಾಗಿದೆ.ಏಪ್ರಿಲ್ ತಿಂಗಳಲ್ಲಿ ೧೭ ಪ್ರಕರಣಗಳ ಪೈಕಿ ೪೬ ಜನರ ಬಂಧನ ಮಾಡಲಾಗಿದ್ದು, ೫೩೦೫೦ ರೂ.ನಗದು ಹಣ ಹಾಗೂ ೨೦ ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ. ಬಂಽತ ಒಟ್ಟು ೬೦ ಜನ ಆರೋಪಿಗಳಿಂದ ೭೮೧೫೦ ರೂ. ನಗದು ಹಣ ಮತ್ತು ೨೦ ಮೊಬೈಲ್‌ಗಳಲ್ಲಿ ಪೊಲೀಸ್ ಇಲಾಖೆ ವಶಪಡಿಸಿಕೊಂಡಿದೆ.
೧ ಸಾವಿರಕ್ಕೆ ೫ ರಿಂದ ೧೦ ಸಾವಿರ ವಿತರಣೆ
ಐಪಿಎಲï ಕ್ರಿಕೆಟï ಪಂದ್ಯದಲ್ಲಿ ಸೆಣಸುವ ಎರಡು ತಂಡಗಳ ಪೈಕಿ ಒಂದು ತಂಡದ ಪರ ಬೆಟ್ಟಿಂಗï ಕಟ್ಟಿದರೆ ಒಂದು ಸಾವಿರಕ್ಕೆ ೫ ಸಾವಿರ ಹಾಗೂ ಇನ್ನೊಂದು ತಂಡದ ಪರ ಕಟ್ಟಿದರೆ ಒಂದು ಸಾವಿರಕ್ಕೆ ೧೦ ಸಾವಿರ ರೂಪಾಯಿ ನೀಡುವ ಆಸೆ ತೋರಿಸಿ ಜನರಿಂದ ಹಣ ಪೀಕಲಾಗುತ್ತಿದೆ. ಸಾಲ ಮಾಡಿ ಬೆಟ್ಟಿಂಗ್ ಕಟ್ಟಿದ ಎಷ್ಟೊ ಜನ ಯುವಕ ಊರು ಬಿಟ್ಟು ದೇಶಾಂತರ ಹೋಗಿರುವ ಘಟನೆಗಳನ್ನು ನೋಡಬಹುದಾಗಿದೆ.
ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಯಾರು ಹಣ ಗಳಿಸುವುದಿಲ್ಲ ಎಂಬುದನ್ನು ಜನರು ಅರಿತುಕೊಳ್ಳಬೇಕು. ಕ್ರಿಕೆಟ್ ಬೆಟ್ಟಿಂಗ್ ದಂಧೆ ಕಂಡುಬAದರೆ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರೆ ತಕ್ಷಣವೆ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಿನಲ್ಲಿ ಒಟ್ಟು ೨೮ ಪ್ರಕರಣಗಳು ದಾಖಲಾಗಿದ್ದು, ಒಟ್ಟು ೭೮೧೫೦ ರೂ ಹಣ ಜಪ್ತಿ ಮಾಡಲಾಗಿದೆ. ಎಂ.ಪುಟ್ಟಮಾದಯ್ಯ ಎಸ್ಪಿ ರಾಯಚೂರು