ಸೌದಿ ಅರೇಬಿಯಾದಲ್ಲಿ ಕ್ರಿಕೆಟ್ ಬೆಟ್ಟಿಂಗ್; ಖಾನಾಪುರದಲ್ಲಿ ಹೊಡೆದಾಟ

cricket-bat-ball-26560801.jpg
Published on


 ಬೆಳಗಾವಿ:ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಸೋತಿದ್ದ ಹಣ ವಾಪಸ್ ಕೊಡದಿರುವ ವಿಷಯಕ್ಕೆ ಸಂಬAಽಸಿದAತೆ  ಎರಡು ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ ಇಬ್ಬರಿಗೆ ಚಾಕು ಇರಿತ ಪ್ರಕರಣ ಖಾನಾಪುರ ಪೊಲೀಸ್ ಠಾಣೆಯಲ್ಲಿ ಸೋಮವಾರ ದಾಖಲಾಗಿದೆ.
ಖಾನಾಪುರ ತಾಲೂಕಿನ ಲೋಂಡಾ ಗ್ರಾಮದ ಅಲ್ತಾಮೇಶ್ ನಾಯಕ್, ಇರ್ಫಾನ್ ಸುಬಾನಿ ಗಾಯಾಳು.
ಸೌದಿ ಅರೇಬಿಯಾಗೆ ಹೋದ ಸಂದರ್ಭದಲ್ಲಿ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಗಾಯಾಳು ಅಲ್ಪಾಮೇಶ್ ನಾಯ್ಕ್ ಎಂಬುವವನ್ನು ಸೋತಿದ್ದನು. ಊರಿಗೆ ವಾಪಾಸ್ ಆದ ಬಳಿಕ ಹಣ ಕೊಡುವುದಾಗಿ ಹೇಳಿದ್ದನು. ಆದರೆ, ಹಣ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಭಾನುವಾರ ಲೋಂಡಾ ಗ್ರಾಮದಲ್ಲಿ ಬೆಳಗಾವಿ ನಗರದ ನಿವಾಸಿ ಆಸೀಫ್ ಜಮಾದಾರ ಸೇರಿ ಮೂವರು ಜನರು ಸೇರಿ ಅಲ್ಪಾಮೇಶ್ ನಾಯ್ಕ್ ಎಂಬುವವ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ  ಪರಸ್ಪರ ಹೊಡೆದಾಟದಲ್ಲಿ ಇಬ್ಬರಿಗೂ ಚಾಕೂ ಇರಿತವಾಗಿದೆ. ತೀವ್ರ ಗಾಯಗೊಂಡಿರುವ ಇಬ್ಬರು ಬಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಪ್ರಕರಣ ದಾಖಲಿಸಿಕೊಂಡು ಮೂವರನ್ನು ಬಂಽಸಲಾಗಿದೆ ಎಂದು  ಖಾನಾಪುರ ಠಾಣೆ ಪೊಲೀಸರು ತಿಳಿಸಿದ್ದಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net