Cricket ಸಾಗರ ಪುತ್ರ ತಂಡ ಚಾಂಪಿಯನ್‌

Cricket
Published on

ಕಾರವಾರ: ನಗರದ ಮಾಲಾದೇವಿ ಮೈದಾನದಲ್ಲಿ, ಮಾಲಾದೇವಿ ಸ್ಪೋರ್ಟ್ಸ್ ಕ್ಲಬ್‌ನಿಂದ ಆಯೋಜಿಸಿದ್ದ ತಾಲೂಕಿನ ನಗರದ ವಾರ್ಡ್ವಾರು ಹಾಗೂ ಗ್ರಾಪಂವಾರು ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಾಜಾಳಿಯ ಸಾಗರಪುತ್ರ ತಂಡ ಚಾಂಪಿಯನ್ ಆಗಿ, ಕಾರವಾರ ಎನ್‌ಸಿಬಿ ತಂಡ ರನ್ನರ್ ಅಪ್ ಅಗಿ ಹೊರಹೊಮ್ಮಿತು.

ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಹಾಗೂ ಯುವ ಬಿಜೆಪಿ ನಾಯಕ ಪರ್ಬತ್ ಸಂತೋಷ ನಾಯ್ಕ ನೇತೃತ್ವದಲ್ಲಿ 8 ದಿನಗಳ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು.

ಬಹುಮಾನ ಮತ್ತು ಟ್ರೋಪಿ ವಿತರಿಸಿ ಮಾತನಾಡಿದ ರೂಪಾಲಿ ಎಸ್.ನಾಯ್ಕ, ಕ್ರೀಡೆಯಿಂದ ಮನರಂಜನೆ, ದೈಹಿಕ ಸ್ವಾಸ್ಥ್ಯ ದೊರೆಯುವುದಲ್ಲದೆ, ಸಂಘಟನೆ ಸಾಧ್ಯವಾಗುತ್ತದೆ. ಇಂತಹ ಕ್ರೀಡಾಕೂಟ ಯುವ ಆಟಗಾರರಿಗೆ ಉತ್ತಮ ಅವಕಾಶವನ್ನೂ ಒದಗಿಸುತ್ತದೆ. ಕ್ರೀಡಾಕೂಟದಲ್ಲಿ ಪಾಲ್ಗೊಂಡ ಎಲ್ಲರೂ ಅಭಿನಂದನಾರ್ಹರು ಎಂದರು.

ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೆಕರ, ಬಿಜೆಪಿ ನಗರ ಮಂಡಲ ಅಧ್ಯಕ್ಷರಾದ ನಾಗೇಶ ಕುರ್ಡೇಕರ್, ಗ್ರಾಮೀಣ ಮಂಡಲದ ಅಧ್ಯಕ್ಷ ಸುಭಾಷ್ ಗುನಗಿ, ಆನಂದ ನಾಯ್ಕ, ನಗರಸಭೆ ಸದಸ್ಯ ಪ್ರೇಮಾನಂದ ಗುನಗಾ, ಮನೋಜ ಬಾಂದೇಕರ್, ಹನುಮಂತ ತಳವಾರ, ಮಾಲಾದೇವಿ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಮುರಳೀಧರ ನಾಯ್ಕ, ಕಾರ್ಯದರ್ಶಿ ಅಮಿತ ಕಾಮತ್, ಕಾರವಾರ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಗಿರೀಶ್ ನಾಯ್ಕ, ರತ್ನಾಕರ ನಾಯ್ಕ, ಅರುಣ ಗುನಗಿ, ಡೊಮನಿಕ್ ಡಾಯಸ, ಪ್ರಸನ್ನ ಕಾಮತ್ ಇತರರು ಇದ್ದರು.

ಇದನ್ನೂ ಓದಿ: 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net