

ಕುಶಾಲನಗರ:
ಕೂರ್ಗ್ ವಾಟರ್ ಪಾರ್ಕ್ ವತಿಯಿಂದ ಕುಶಾಲನಗರದಲ್ಲಿ ಆಯೋಜಿತ ಪ್ರೀಮಿಯರ್ ಲೀಗ್ ಹೊನಲು ಬೆಳಕಿನ ಸೀಸನ್ 4 ರ ಪಂದ್ಯದಲ್ಲಿ ಸೈಜನ್ ಪೀಟರ್ ಮಾಲಿಕತ್ವದ ಎಂ.ಬಿ. ಹರೀಶ್ ನಾಯಕತ್ವದ ಸೆನ್ಸಾ ತಂಡ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಬುಧವಾರ ರಾತ್ರಿ ರೋಚಕವಾಗಿ ನಡೆದ ಫೈನಲ್ ಪಂದ್ಯದಲ್ಲಿ ಸೆನ್ಸಾ ತಂಡದ ಮುಂದೆ ದಿಲೀಪ್ ಮಾಲಿಕತ್ವದ ಕಬೀರ್ ನಾಯಕತ್ವದ ಟೀಮ್ ಬ್ರದರ್ಸ್ ತಂಡ ವಿರೋಚಿತ ಸೋಲು ಕಾಣುವ ಮೂಲಕ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು
ತೃತೀಯ ಸ್ಥಾನವನ್ನು ಹರ್ಶಿಲ್ ಫ್ರೆಂಡ್ಸ್, ನಾಲ್ಕನೇ ಸ್ಥಾನವನ್ನು ಟೀಮ್ ಚಿಲ್ ಬಾಯ್ಸ್ ಪಡೆದುಕೊಂಡಿತು. ಟೀಮ್ ಬ್ರದರ್ಸ್ ತಂಡದ ಇಬ್ರಾಹಿಂ ಈ ಪಂದ್ಯಗಳಲ್ಲಿ ಸರ್ವಶ್ರೇಷ್ಠ ಪ್ರದರ್ಶನವನ್ನು ನೀಡಿ ಸರಣಿ ಪುರುಷೋತ್ತಮ ಪ್ರಶಸ್ತಿ ಪಡೆಯುವ ಮೂಲಕ ಹೀರೋ ಹೋಂಡಾ ಡಿಓ ದ್ವಿಚಕ್ರ ವಾಹನ ಗಳಿಸಿದರು. ಸೆನ್ಸಾ ತಂಡದ ಮನೋಹರ್ ಉತ್ತಮ ಬ್ಯಾಟ್ಸ್ಮನ್, ಉತ್ತಮ ಆಲ್ ರೌಂಡರ್ ಪೆಪ್ಸಿ ತಂಡದ ಪವನ್, ಉತ್ತಮ ಬೌಲರ್ ಆಗಿ ಬ್ರದರ್ಸ್ ತಂಡದ ನಂದೀಶ್, ಉತ್ತಮ ಕ್ಷೇತ್ರ ರಕ್ಷಕನಾಗಿ ಹರ್ಷಿಲ್ ತಂಡದ ಪ್ರಸನ್ನ ಬಾಂಡ್, ಉತ್ತಮ ವಿಕೆಟ್ ಕೀಪರ್ ಆಗಿ ಸೆನ್ಸಾ ತಂಡದ ಹರೀಶ್, ಉತ್ತಮ ಕ್ಯಾಚ್ ಭುವನೇಶ್ವರಿ ತಂಡದ ನಂದೀಶ್ ಪ್ರಶಸ್ತಿಗಳನ್ನು ಪಡೆದುಕೊಂಡರು.
ಕೂರ್ಗ್ ವಾಟರ್ ಪಾರ್ಕ್ನ ಲಕ್ಷ್ಮೀನಾರಾಯಣ್ (ನಾಣಿ) ಸಾರಥ್ಯದಲ್ಲಿ ಮೂಡಿಬಂದ ಲೆಜೆಂಡ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಸೀಸನ್ 4ರ ಪಂದ್ಯಗಳು ಜಾತ್ರಾ ಮೈದಾನದ ಕ್ರೀಡಾಂಗಣದಲ್ಲಿ ಫೆ. 21 ರಿಂದ ಪ್ರಾರಂಭವಾಗಿ ಫೆ.26 ರ ಮಧ್ಯರಾತ್ರಿಯಲ್ಲಿ ಮುಕ್ತಾಯವಾಗಿದೆ. ಈ ಕ್ರೀಡಾಕೂಟದಲ್ಲಿ ಒಟ್ಟು 13 ತಂಡಗಳು ಭಾಗವಹಿಸಿದ್ದು 195 ಲೆಜೆಂಡ್ ಆಟಗಾರರು ಪಾಲ್ಗೊಂಡಿದ್ದರು. 82 ಪಂದ್ಯಗಳು ನಡೆಯಿತು.
ಪ್ರಥಮ ಬಹುಮಾನ 1.33 ಲಕ್ಷರೂ., ದ್ವಿತೀಯ ಬಹುಮಾನ 77 ಸಾವಿರ ರೂ., ತೃತೀಯ ಬಹುಮಾನ 30 ಸಾವಿರ ರೂ., ನಾಲ್ಕನೇ ಬಹುಮಾನ 10 ಸಾವಿರ ರೂ. ವಿತರಿಸಲಾಯಿತು. ಸೆನ್ಸಾ ತಂಡದ ಸ್ಟಾರ್ ಆಟಗಾರ ಮನೋಹರ್ ತಂಡದ ಪರವಾಗಿ ಅತ್ಯುತ್ತಮ ಪ್ರದರ್ಶನ ನೀಡಿದಕ್ಕೆ ತಂಡದ ಮಾಲೀಕ ಸೈಜನ್ ಪೀಟರ್ 2 ಲಕ್ಷ ರೂ. ಮೌಲ್ಯದ ಬೈಕ್ ನೀಡಿದರು.