ದಶಮಂಟಪ ಪ್ರೀಮಿಯರ್ ಲೀಗ್ ಕ್ರಿಕೆಟ್

cricket
Published on

ಮಡಿಕೇರಿ:

ಮಡಿಕೇರಿ ದಸರಾದಲ್ಲಿ ಪಾಲ್ಗೊಳ್ಳುವ ದಸರಾ ದಶಮಂಟಪ ಸಮಿತಿಗಳಿಗಾಗಿಯೇ ಇದೇ ಮೊದಲ ಬಾರಿಗೆ ದಶಮಂಟಪ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ಏರ್ಪಡಿಸಲಾಗಿದೆ ಎಂದು ಜ್ಯೋತಿ ಯುವಕ ಸಂಘದ ಉಪಾಧ್ಯಕ್ಷ ಹೆಚ್.ಎನ್. ಮಹೇಶ್ ತಿಳಿಸಿದ್ದಾರೆ.

ಮಲ್ಲಿಕಾರ್ಜುನ ನಗರ ಶ್ರೀ ಕೋದಂಡರಾಮ ದೇವಾಲಯ ಸಮಿತಿ ಮತ್ತು ಜ್ಯೋತಿ ಯುವಕ ಸಂಘದ ವತಿಯಿಂದ ಆಯೋಜಿಸಲಾಗುತ್ತಿರುವ ಈ ಪಂದ್ಯಾವಳಿ ಶನಿವಾರ (ಫೆ.15) ಮತ್ತು ಭಾನುವಾರ (ಫೆ.16) ನಡೆಯಲಿದೆ. ದಶಮಂಟಪಗಳಿಗಾಗಿ ಮೊದಲ ವರ್ಷ ನಡೆಸಲಾಗುತ್ತಿರುವ ಈ ಪಂದ್ಯಾವಳಿಯಲ್ಲಿ ಈ ಬಾರಿ ಕಾರಣಾಂತರಗಳಿAದ 3 ಮಂಟಪಗಳ ತಂಡಗಳು ಭಾಗವಹಿಸುತ್ತಿಲ್ಲ. ಉಳಿದ 7 ಮಂಟಪಗಳ ತಂಡಗಳು ಪಾಲ್ಗೊಳ್ಳುತ್ತಿವೆ. 4 ಓವರ್‌ಗಳ ಪಂದ್ಯ ಇದಾಗಿದ್ದು. ಮಡಿಕೇರಿ ತಾಲೂಕಿನ ಆಟಗಾರರಿಗೆ ಮಾತ್ರ ಸೀಮಿತವಾಗಿದೆ. ಒಂದು ತಂಡದಲ್ಲಿ 9+2 ಆಟಗಾರರು ಇರಬೇಕು.

ವಿಜೇತ ತಂಡಕ್ಕೆ 50 ಸಾವಿರ ರೂ. ಮತ್ತು ರನ್ನರ್‌ಅಪ್ ತಂಡಕ್ಕೆ 25 ಸಾವಿರ ರೂ. ನಗದು ಬಹುಮಾನ ಇದೆ. ವಿಜೇತ ತಂಡಕ್ಕೆ ರೋಲಿಂಗ್ ಟ್ರೋಫಿ ಕೂಡ ಇರಲಿದೆ. ಪಂದ್ಯಾವಳಿ ಪೊಲೀಸ್ ಮೈದಾನದಲ್ಲಿ ನಡೆಯಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಶನಿವಾರ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಡಾ. ಮಂತರ್ ಗೌಡ, ಎಸ್.ಪಿ. ಕೆ. ರಾಮರಾಜನ್, ಮುಡಾ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಸಮಾಜ ಸೇವಲ ಕೆ.ಎಂ.ಬಿ. ಗಣೇಶ್, ಹಿರಿಯ ಪತ್ರಕರ್ತ ಜಿ. ರಾಜೇಂದ್ರ ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಜ್ಯೋತಿ ಯುವಕ ಸಂಘದ ಅಧ್ಯಕ್ಷ ಹೆಚ್.ಎಂ. ವಿಶ್ವನಾಥ್, ಕಾರ್ಯದರ್ಶಿ ವಿಜಯ್, ಪದಾಧಿಕಾರಿಗಳಾದ ಹೆಚ್.ಜಿ. ಯತೀಶ್, ಹೆಚ್.ಜಿ. ಯಶವಂತ್, ಹೆಚ್.ಸಿ. ತೇಜಸ್ ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net