ಕೋವಿಡ್‌ಗೆ ಹೆದರಿದ ಸಂಬಂಧಿಕರು ಮಹಿಳೆಯ ನೇತೃತ್ವದಲ್ಲಿ ಅಂತ್ಯಸಂಸ್ಕಾರ

covid
Published on

ಪಡುಬಿದ್ರಿ: ಕಾಪು ತಾಲೂಕಿನ ಮಲ್ಲಾರು ಗ್ರಾಮದ ಮಹಿಳೆಯೊಬ್ಬರು ಸಹಜವಾಗಿ ಮೃತಪಟ್ಟಿದ್ದು, ಕರೊನಾ ಸೋಂಕಿನ ಭೀತಿಯಿಂದ ಸಂಬಂಧಿಕರು ದಫನ ಕಾರ್ಯ ನಡೆಸಲು ಹಿಂಜರಿದ ಸಂದರ್ಭ ಜಮಾತೆ ಇಸ್ಲಾಮಿ ಹಿಂದ್ ಕಾಪು ವರ್ತುಲ ಸಂಚಾಲಕಿ ಶೆಹೆನಾಜ್ ಎಂಬವರು ಮುಂಚೂಣಿಯಲ್ಲಿ ನಿಂತು ಕೊಪ್ಪಲಂಗಡಿ ಖಬರಸ್ಥಾನದಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

ಮಹಿಳೆಯ ಸಹಜ ಸಾವಿನ ಬಗ್ಗೆ ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಪ್ರಮಾಣ ಪತ್ರ ನೀಡಿದ್ದರು. ಆದರೆ ಮೃತಪಟ್ಟ ಮಹಿಳೆಗೆ ಕರೊನಾ ಸೋಂಕು ಇದ್ದಿರಬಹುದೆಂದು ಸಂಬಂಧಿಕರು, ನೆರೆಹೊರೆಯವರು ಹತ್ತಿರ ಬಂದಿರಲಿಲ್ಲ. ಇದನ್ನರಿತ ಶೆಹೆನಾಜ್ ಅವರು ಜಮಾತೆ ಇಸ್ಲಾಮಿ ಹಿಂದ್ ಸ್ಥಾನೀಯ ಅಧ್ಯಕ್ಷ ಅನ್ವರ್ ಅಲಿ ಮಾರ್ಗದರ್ಶನದಲ್ಲಿ ಅಶ್ಫಾಕ್ ಅಬ್ದುಲ್ ಅಲಿ, ತೌಸಿಫ್, ತಾರೀಖ್, ಇರ್ಫಾನ್, ಆತೀಫ್, ಆಸೀಫ್ ಶೇಖ್, ಮಹಮ್ಮದ್ ಅಲಿ, ಅಬ್ದುಲ್ ಜಲೀಲ್ ಅವರಿದ್ದ ತಂಡದ ಸಹಕಾರದಲ್ಲಿ ಕೋವಿಡ್ ನಿಯಮಾನುಸಾರ, ಮುಂಜಾಗ್ರತಾ ಕ್ರಮ ವಹಿಸಿ ದಫನ ಕಾರ್ಯ ನಡೆಸಿತು. ಮೌಲಾನಾ ಮಹಮ್ಮದ್ ಪರ್ವೇಜ್ ಆಲಂ ಜನಾಝಾ ನಮಾಜ್ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net