ಸರ್ಕಾರಿ ಶಾಲೆ ಪಕ್ಕದಲ್ಲಿ ಶವಸಂಸ್ಕಾರ

ಲಿಂಗಸುಗೂರಿನಲ್ಲಿ ಎಸಿ ಬಸವಣೆಪ್ಪ ಕಲಶೆಟ್ಟಿಗೆ ಸರ್ಕಾರಿ ಆದರ್ಶ ವಿದ್ಯಾಲಯದ ಎಸ್ಡಿಎಂಸಿ ಸದಸ್ಯರು ಮನವಿ ಸಲ್ಲಿಸಿದರು. ಎಸ್ಡಿಎಂಸಿ ಅಧ್ಯಕ್ಷ ಅಮರೇಶ ಗಂಭೀರಮಠ, ಸದಸ್ಯರಾದ ಬಸವರಾಜ ಹೊಸೂರು, ಡಾ.ಮಹ್ಮದ್ ಜಾವೀದ್, ಹನುಮಂತಪ್ಪ ಕನ್ನಾಳ, ವಿಜಯಕುಮಾರ ಇತರರಿದ್ದರು.

Published on

ಲಿಂಗಸುಗೂರು: ಪಟ್ಟಣದ ಕರಡಕಲ್ ರಸ್ತೆಯ ಸರ್ಕಾರಿ ಆದರ್ಶ ವಿದ್ಯಾಲಯ ಮುಂಭಾಗದಲ್ಲಿ ಶವಸಂಸ್ಕಾರ ನಡೆಸಲಾಗುತ್ತಿದ್ದು, ಸ್ಮಶಾನ ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸಿ ಗುರುವಾರ ಎಸ್ಡಿಎಂಸಿ ಸದಸ್ಯರು ಎಸಿ ಬಸವಣೆಪ್ಪ ಕಲಶೆಟ್ಟಿಗೆ ಮನವಿ ಸಲ್ಲಿಸಿದರು.

ಸರ್ಕಾರಿ ಆದರ್ಶ ವಿದ್ಯಾಲಯದ ಮೈದಾನಕ್ಕೆ ಹೊಂದಿಕೊಂಡ ಭೂಮಿಯಲ್ಲಿ ಸಾರ್ವಜನಿಕ ಶವಸಂಸ್ಕಾರ ನಡೆಸಲಾಗುತ್ತಿದೆ. ಮಕ್ಕಳು ಭಯಗೊಂಡು ಶಾಲೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ತರಗತಿ ಅವಧಿಯಲ್ಲಿ ಶವಸಂಸ್ಕಾರದ ವೇಳೆ ವಾದ್ಯಗಳ ಸದ್ದು, ಕುಟುಂಬದವರು ಅಳುವುದು ತರಗತಿ ಒಳಗೆ ಕೇಳುತ್ತಿದ್ದು, ಬೋಧನೆಗೆ ಅಡ್ಡಿ ಉಂಟಾಗುತ್ತಿದೆ. ಆದ್ದರಿಂದ ಕೂಡಲೇ ಶವಸಂಸ್ಕಾರ ನಿಲ್ಲಿಸಿ ಸ್ಮಶಾನಕ್ಕೆ ಬೇರೆಡೆ ಭೂಮಿ ನೀಡಿ ಮಕ್ಕಳ ಕಲಿಕೆಗೆ ಅನುಕೂಲ ಮಾಡಬೇಕು ಎಂದು ಆಗ್ರಹಿಸಿದರು.

ಎಸ್ಡಿಎಂಸಿ ಅಧ್ಯಕ್ಷ ಅಮರೇಶ ಗಂಭೀರಮಠ, ಸದಸ್ಯರಾದ ಬಸವರಾಜ ಹೊಸೂರು, ಡಾ.ಮಹ್ಮದ್ ಜಾವೀದ್, ಹನುಮಂತಪ್ಪ ಕನ್ನಾಳ, ವಿಜಯಕುಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net