ಅವಿಭಕ್ತ ಕುಟುಂಬದಿಂದ ಸಂಸ್ಕಾರ

CHR nn
ಚೌಳಹಿರಿಯೂರಿನಲ್ಲಿ ಶ್ರಾವಣ ಸಂಜೆ ಕಾರ್ಯಕ್ರಮವನ್ನು ಗ್ರಾಪಂ ಮಾಜಿ ಅಧ್ಯಕ್ಷ ಎಚ್.ಎಸ್.ಮಲ್ಲೇಶ್, ಗಾಡಿ ಯತೀಶ್, ಉದ್ಘಾಟಿಸಿದರು. ನಂಜುಂಡಶಾಸ್ತ್ರಿ,, ಎಚ್.ಸಿ.ಮಹಲಿಂಗಪ್ಪ, ಬಿ.ಆರ್.ನಟೇಶ್ ಇತರರಿದ್ದರು.
Published on

ಚೌಳಹಿರಿಯೂರು: ಅವಿಭಕ್ತ ಕುಟುಂಬಗಳಿಂದ ಸಂಸ್ಕಾರ ಬೆಳೆಯುತ್ತದೆ. ವಿಭಕ್ತ ಕುಟುಂಬಗಳಲ್ಲಿ ಮಕ್ಕಳ ಮೇಲೆ ಹೆಚ್ಚು ಗಮನ ನೀಡಲು ಸಾಧ್ಯವಾಗದ ಕಾರಣ ಗುರು-ಹಿರಿಯರ ಮೇಲಿನ ಭಯ, ಭಕ್ತಿ ಕಡಿಮೆಯಾಗುತ್ತಿದೆ ಎಂದು ಶಿಕ್ಷಕ ಕಂಬಳಿ ದೇವರಾಜ್ ಹೇಳಿದರು.

ಬಿಸಿಎಂ ಹಾಸ್ಟೆಲ್‌ನಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಶ್ರಾವಣ ಸಂಜೆ ಕಾರ್ಯಕ್ರಮದಲ್ಲಿ ಮಾತನಾಡಿ, ಶರಣರು ಆನೆಯನ್ನು ಬೆನ್ನತ್ತಿ ಹೊದವರಲ್ಲ. ಮೌಢ್ಯ ನಿರ್ಮೂಲನೆಗೆ ತಿಳಿಹೇಳಿದವರು ಎಂದರು.
ಶಿಕ್ಷಕ ಎಚ್.ಎಂ.ರುದ್ರೇಶ್ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರು ಸಮಾಜದಲ್ಲಿ ಸಮಾನತೆ ತಂದುಕೊಟ್ಟರು. ಲಿಂಗ ತಾರತಮ್ಯ ಹಾಗೂ ಜಾತಿ ಭೇದ ಇಲ್ಲದೆ ಎಲ್ಲರೂ ಸಮಾನರೆಂದು ಸಾರಿದರು ಎಂದರು.
ನಂಜುಂಡಶಾಸ್ತ್ರಿ ಮಾತನಾಡಿ, ಜನರು ಆಸ್ತಿ, ಹಣ ಸಂಪಾದನೆಯಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದು, ಸಂಸ್ಕಾರದಿಂದ ದೂರವಾಗುತ್ತಿದ್ದಾರೆ ಎಂದು ಹೇಳಿದರು.
ಎಚ್.ಸಿ.ಮಹಲಿಂಗಪ್ಪ, ಬಿ.ಆರ್.ನಟೇಶ್, ದೇವರಾಜ್, ಗಾಡಿ ಯತೀಶ್, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ವಿರೂಪಾಕ್ಷ, ಅಣಿಗೆರೆ ಯೋಗ ಸಂಸ್ಥೆ ಅಧ್ಯಕ್ಷ ಕುಮಾರ್, ಬಸವರಾಜ್, ಶೈಲ ಶೆಟ್ಟಿ, ಜಿ.ಬಿ.ಓಂಕಾರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net