

ಶಿಗ್ಗಾಂವಿ: ಸ್ಥಳೀಯ ಪುರಸಭೆ ಮತ್ತು ಕೆನರಾ ಬ್ಯಾಂಕ್ ಸಹಯೋಗದಲ್ಲಿ ಸ್ವ ಸಹಾಯ ಸಂಘಗಳ ಸಾಲ ಮೇಳ ಮತ್ತು ಜಾಗೃತಿ ಶಿಬಿರ ಪುರಸಭೆ ಸಭಾಭವನದಲ್ಲಿ ಜರುಗಿತು.
ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಪ್ರಕಾಶ ಅವುಂಕಾರ, ಕೇಂದ್ರ ಸರ್ಕಾರದ ಯೋಜನೆ ಮತ್ತು ಪಂಚಾಯತ್‌ಗಳ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಕೆನರಾ ಬ್ಯಾಂಕ್ ಪ್ರಾದೇಶಿಕ ಅಧಿಕಾರಿ ಪ್ರಶಾಂತ ಅವರು, ಬ್ಯಾಂಕ್ ಸಾಲಗಳ ಬಗ್ಗೆ ಮತ್ತು ಸಾಮಾಜಿಕ ಭದ್ರತೆ ಬಗ್ಗೆ ಮಾಹಿತಿ ನೀಡಿದರು.
ಡಿವಿಜನಲ್ ಮ್ಯಾನೇಜರ್ ಹರಿ ಓಂ ಸೋನು ಕಾರ್ಯಕ್ರಮ ಉದ್ಘಾಟಿಸಿದರು. ಹುಬ್ಬಳ್ಳಿ ರಿಜನಲ್ ಆಫೀಸರ್ ಅನುಪಕುಮಾರ, ಸ್ವಸಹಾಯ ಗುಂಪುಗಳಿಗೆ ಸಾಲ ಮಂಜೂರಾತಿ ಪ್ರಮಾಣ ಪತ್ರಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕೃಷಿ ಇಲಾಖೆಯ ಶಿವನಗೌಡ ಪಾಟೀಲ, ಪುರಸಭೆ ಸಮುದಾಯ ಸಂಘಟನಾ ಅಧಿಕಾರಿ ಶೈಲಜಾ ಪಾಟೀಲ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಸಂಯೋಜಕ ರಾಜೇಶ್ವರಿ ಶಿಬಿರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಅಂತಾರಾಷ್ಟ್ರೀಯ ಮಹಿಳಾ ಕ್ರೀಡಾಪಟು ಗಂಗವ್ವ ಹರಿಜನ ಅವರನ್ನು ಪುರಸಭೆ ಸದಸ್ಯರು ಸನ್ಮಾನಿಸಿದರು.
ಗೌಸ್ಕಾನ್ ಮುನಸಿ, ಜಾಫರಖಾನ್ ಪಠಾಣ, ಮುಸ್ತಾಕ್ ಅಹಮದ್ ತಹಶೀಲ್ದಾರ್, ಪುರಸಭೆ ಅಧಿಕಾರಿ ವಿ.ಎಸ್. ಪಾಟೀಲ, ಹೇಮಾ ಕಲಿವಾಳ, ಶಿಲ್ಪಾ ಮಂಡಗನಳ್ಳಿ,ದ್ರಾಕ್ಷಾಯಿಣಿ ಅಜ್ಜಂಪುರ, ರಾಜು ಕೆಂಭಾವಿ ಪಾಲ್ಗೊಂಡಿದ್ದರು.