ಸುಧೀರ್ ಕುಮಾರ್ ಮುರೊಳ್ಳಿ ಕಾರ್ಯಕ್ಕೆ ಮನ್ನಣೆ ನೀಡಿ

9sri-1 (3)
ಶೃಂಗೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆಯೋಜಿಸಿದ್ದ ಸಭೆಯಲ್ಲಿ ನ್ಯಾಯಾವಾದಿ ಗಾಯಕ ಜಗದೀಶ್ ಕಣದಮನೆ ಮಾತನಾಡಿದರು .ಪ್ರದೀಪ್ ಯಡದಾಳು, ನಾಗರಾಜ್ ಹುಲಗಾರು, ಸುಬ್ರಹ್ಮಣ್ಯ ಹೊನ್ನವಳ್ಳಿ ಇದ್ದರು.
Published on

ಶೃಂಗೇರಿ: ಕಾಂಗ್ರೆಸ್ ವಕ್ತಾರರಾಗಿ ಕೆಪಿಸಿಸಿ ಸದಸ್ಯರಾಗಿ ಪಕ್ಷದಲ್ಲಿ ಗುರುತರ ಜವಾಬ್ದಾರಿ ನಿರ್ವಹಿಸಿ ಜನಸಾಮಾನ್ಯರ ಸಮಸ್ಯೆಗಳಿಗೆ ನಿರಂತರ ಸ್ಪಂದಿಸುತ್ತಿರುವ ನ್ಯಾಯಾವಾದಿ ಸುಧೀರ್ ಕುಮಾರ್ ಮುರೊಳ್ಳಿ ಅವರಿಗೆ ಲೋಕಸಭೆ ಚುನಾವಣೆ ಟಿಕೆಟ್ ನೀಡಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಅವರು ಶುಕ್ರವಾರ ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆಯೋಜಿಸಿದ್ಧ ಸಭೆಯಲ್ಲಿ ಮಾತನಾಡಿದ ಅವರು, ಲೋಕಸಭೆ ಕ್ಷೇತ್ರ ಕರಾವಳಿ, ಮಲೆನಾಡು, ಬಯಲುಸೀಮೆ ಪ್ರದೇಶಗಳನ್ನು ಒಳಗೊಂಡಿರುತ್ತದೆ. ಜನಸಮುದಾಯ, ಭಾಷೆ, ಸಂಸ್ಕೃತಿ, ಕೃಷಿ ಬದುಕಿನ ಪದ್ಧತಿಯ ವಿಚಾರಗಳನ್ನು ಒಳಗೊಂಡ ಈ ಕ್ಷೇತ್ರ ವೈವಿಧ್ಯತೆಯಿಂದ ಕೂಡಿರುತ್ತದೆ. ಎಂಟು ವಿಧಾನಸಭೆ ಕಾರ್ಯಕರ್ತರಿಗೆ ಚಿರಪರಿಚಿತರಾದ ಸುಧೀರ್ ಅವರು ಪಕ್ಷದ ಸಂಘಟನೆಗೆ ಅವಿರತವಾಗಿ ಶ್ರಮಿಸಿದ್ದಾರೆ. ಇವರ ಕಾರ್ಯವೈಖರಿಯನ್ನು ಗಮನದಲ್ಲಿ ಇರಿಸಿಕೊಂಡು ಪಕ್ಷ ಅವರ ಕೆಲಸಕ್ಕೆ ಮನ್ನಣೆ ನೀಡಬೇಕಿದೆ ಎಂದರು. ಮಲೆನಾಡು ಜನಪರ ಒಕ್ಕೂಟದ ಅಧ್ಯಕ್ಷ ಅನಿಲ್ ಹೊಸಕೊಪ್ಪ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಜನಪರ ಕಾಳಜಿ ಹೊಂದಿ ಆನೇಕ ಹೋರಾಟಗಳಲ್ಲಿ ಭಾಗಿಯಾಗಿರುವ ಸುಧೀರ್ ಕುಮಾರ್ ಮುರೊಳ್ಳಿ ಅವರಲ್ಲಿ ಅತ್ಯುತ್ತಮ ನಾಯಕತ್ವ ಗುಣವಿದೆ. ಕೃಷಿ, ಸಾಹಿತ್ಯ ಸೇರಿದಂತೆ ಎಲ್ಲ ವಿಷಯಗಳಲ್ಲಿ ಸಾಕಷ್ಟು ಜ್ಞಾನ ಹೊಂದಿದ್ದಾರೆ. ಅವರಿಗೆ ಕಾಂಗ್ರೆಸ್ ಶಾಸಕರು ಹಾಗೂ ಮುಖಂಡರ ಬೆಂಬಲವಿದೆ. ಸ್ವತ: ಶಾಸಕ ಟಿ.ಡಿ.ರಾಜೇಗೌಡರು ಮುಖ್ಯಮಂತ್ರಿ ಹಾಗೂ ಡಿಸಿಎಂ ಅವರಿಗೆ ಸುಧೀರ್ ಕುಮಾರ್ ಮುರೊಳ್ಳಿ ಅವರಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ ಎಂದರು. ಗಾಯಕ ಜಗದೀಶ್ ಕಣದಮನೆ, ಕೇಶವ್ ಗುತ್ತಳಿಕೆ, ಮುರಳೀಧರ ಪೈ, ಮಂಜುನಾಥ್, ಸಂತೋಷ್ ಕಾಳ್ಯ,ಪ್ರವೀಣ್ ಹಗಡೂರು, ಸತೀಶ್, ರಾಜಕುಮಾರ್ ಹೆಗಡೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net