

ಬ್ಯಾಡಗಿ: ನಿರುದ್ಯೋಗಿ ವ್ಯಾಪಾರಕ್ಕಾಗಿ 25 ಲಕ್ಷ ರೂ. ಸಾಲ ಕೊಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬನಿಂದ 65 ಸಾವಿರ ರೂ. ಪೋನ್ ಪೇ ಮಾಡಿಸಿಕೊಂಡು ಮೋಸ ಮಾಡಿದ ಘಟನೆ ಕುರಿತು ತಾಲೂಕಿನ ಕಾಗಿನೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಬೀರನಕೊಪ್ಪ ಗ್ರಾಮದ ನಾಗರಾಜ ಯಲ್ಲಪ್ಪ ಕರಿಗಾರ (33) ಮೋಸ ಹೋದವರು.
ಇವರಿಗೆ ಅಪರಿಚಿತ ವ್ಯಕ್ತಿಯೊಬ್ಬ ನಿರುದ್ಯೋಗಿ ವ್ಯಾಪಾರಕ್ಕಾಗಿ 25 ಲಕ್ಷ ರೂ. ಸಾಲ ಕೊಡುವುದಾಗಿ ಮೇಸೆಜ್ ಕಳುಹಿಸಿದ್ದಾನೆ. ಮೇಸೆಜ್ ಓದಿದ ನಾಗರಾಜ ಅವರಿಗೆ ಕರೆ ಮಾಡಿದಾಗ 65 ಸಾವಿರ ರೂ. ಪೋನ್ ಪೇ ಮಾಡಿದರೆ ಸಾಲ ಮಂಜೂರು ಆಗಲಿದೆ ಎಂದು ನಂಬಿಸಿದ್ದಾನೆ. ನಾಗರಾಜ ಹಣ ಹಾಕುತ್ತಿದ್ದಂತೆ ಫೋನ್ ಬಂದ್ ಮಾಡಿಕೊಂಡು ಮೋಸ ಮಾಡಿದ್ದಾನೆ ಎನ್ನಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.