

ರಾಯಚೂರು: ರಕ್ತದಾನ ಮಾಡುವುದರಿಂದ ಒಂದು ಜೀವ ಉಳಿಸಿದ ಶ್ರೇಯಸ್ಸು ದೊರೆಯುವುದರ ಜತೆಗೆ, ನಮ್ಮ ಆರೋಗ್ಯ ವೃದ್ಧಿಯಾಗಲಿದೆ ಎಂದು ರೋಟರಿ ಕ್ಲಬ್ ಜಿಲ್ಲಾ ಗರ್ವನರ್ ಮಾಣಿಕ್ ಹೇಳಿದರು.
ಸ್ಥೀಯ ಪಿಸಿಪಿಬಿ ಪದವಿ ಮಹಾವಿದ್ಯಾಲಯದಲಿ ರೋಟರಿ ಕ್ಲಬ್ ಸೆಂಟ್ರಲ್‌ನಿಂದ ಬುಧವಾ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ದಿನಮಾನದಲ್ಲಿ ತುರ್ತು ರಕ್ತದ ಅಗತ್ಯತೆ ಹೆಚ್ಚಾಗುತ್ತಿದ್ದು, ಎಲ್ಲರೂ ರಕ್ತದಾನ ಮಾಡುವ ಮೂಲಕ ಜೀವ ಉಳಿಸಲು ಮುಂದಾಗಬೇಕು ಎಂದರು.
ರೋಟರಿ ಕ್ಲಬ್ ಯೋಜನಾ ನಿರ್ದೇಶಕ ತ್ರಿವಿಕ್ರಮ ಜೋಷಿ ಮಾತನಾಡಿ, ಅಂಬೇಡ್ಕರ್‌ರ ಮಹಾ ಪರಿನಿರ್ವಾಣ ದಿನದಂದು ರಕ್ತದಾನ ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದೆ. ಮುಂದಿನ ದಿನಗಳಲ್ಲಿ ಕ್ಲಬ್ ವತಿಯಿಂದ ರಕ್ತ ಭಂಡಾರ ಆರಂಭಿಸಲಾಗುವುದು ಎಂದು ತಿಳಿಸಿದರು.
ರೋಟಗಿ ಕ್ಲಬ್ ಸೆಂಟ್ರಲ್ ಅಧ್ಯಕ್ಷ ಡಾ.ಶರಣಬಸವ ಪಾಟೀಲ್ ಜೋಳದೆಡಗಿ ಮಾತನಾಡಿ, ಕ್ಲಬ್ ವತಿಯಿಂದ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿದೆ. ಆರೋಗ್ಯ ತಪಾಸಣೆ, ಪ್ರತಿಭಾ ಪುರಸ್ಕಾರ ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಗಳಲ್ಲಿ ಕ್ಲಬ್ ತೊಡಗಿಕೊಂಡಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕ್ಲಬ್ ಪದಾಕಾರಿಗಳಾದ ಎನ್.ಶಿವಶಂಕರ, ಗುರುನಾಥರೆಡ್ಡಿ, ನಿಜಾನಂದರೆಡ್ಡಿ, ಪ್ರಮೋದಕುಮಾರ, ಬಸವರಾಜ ಎಲಿ, ಕಾಲೇಜು ಪ್ರಾಚಾರ್ಯ ಎಂ.ಜಿ.ಮಾರುತಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.