

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಡಿಜಿಟಲ್ ಮಾರ್ಕೆಟಿಂಗ್ ಇಂದು ಸಾಕಷ್ಟು ಮಹತ್ವ ಪಡೆದುಕೊಂಡಿದ್ದು, ಸೃಜನಶೀಲ ಗುಣ ಹಾಗೂ ತಾಂತ್ರಿಕ ಜ್ಞಾನವುಳ್ಳವರು ಇದರಲ್ಲಿ ಯಶಸ್ಸು ಗಳಿಸಬಹುದು ಎಂದು ಬ್ಲೂಮಾರ್ಕ್ ಡಿಜಿಟಲ್ ಸಂಸ್ಥೆಯ ಮಾಲೀಕ ರಿಷಿ ತಿವಾರಿ ಹೇಳಿದರು.
ಹುಬ್ಬಳ್ಳಿ ಕೆಎಲ್ಇ ಸಂಸ್ಥೆಯ ಕಾಲೇಜ್ ಆಫ್ ಬಿಜಿನೆಸ್ ಅಡ್ಮಿನಿಸ್ಟ್ರೇಷನ್ ಮಂಗಳವಾರ ಆಯೋಜಿಸಿದ್ದ ಡಿಜಿಟಲ್ ಮಾರ್ಕೆಟಿಂಗ್ ಸಮಾವೇಶದಲ್ಲಿ ಮಾತನಾಡಿದ ಅವರು, ವೃತ್ತಿಪರ ಹಾಗೂ ವೈಯಕ್ತಿಕ ಬ್ರ್ಯಾಂಡಿಂಗ್ನಲ್ಲಿ ಸಾಮಾಜಿಕ ಮಾಧ್ಯಮಗಳು ಮಹತ್ವದ ಪಾತ್ರ ವಹಿಸುತ್ತಿವೆ. ಡಿಜಿಟಲ್ ಮಾರ್ಕೆಟಿಂಗ್ ಸಾಕಷ್ಟು ಪ್ರಗತಿ ಸಾಧಿಸಿದ್ದು, ಈ ಕ್ಷೇತ್ರದ ಉದ್ಯೋಗದಲ್ಲಿ ವೃತ್ತಿ ಪ್ರಗತಿಯನ್ನು ಸಾಧಿಸಬಹುದು ಎಂದರು.
ಪ್ರೊ. ರಾಜಶ್ರೀ ಜಿ.ಟಿ. ನಿರೂಪಿಸಿದರು.