

ಧಾರವಾಡ: ಯಾವುದನ್ನೂ ಅಪೇಕ್ಷಿಸದೆ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಡಾ. ಸಿ.ಆರ್. ಯರವಿನತೆಲಿಮಠ ಅವರದು ಗಟ್ಟಿಯಾದ ಸಾಹಿತ್ಯ. ಅವರ ಮೌಲಿಕ ಚಿಂತನೆಗಳು, ಸೃಜನಶೀಲ ಸಾಹಿತ್ಯ ಮುಂದಿನ ಪೀಳಿಗೆಗೆ ಬಹುದೊಡ್ಡ ಕೊಡುಗೆ ಎಂದು ವಿಶ್ರಾಂತ ಪ್ರಾಧ್ಯಾಪಕ ಡಾ. ಸಂಗಮೇಶ ಸವದತ್ತಿಮಠ ಹೇಳಿದರು.
ನಗರದ ಕಮಲಾಪುರದ ಪ್ರಣವ ಪ್ರಕಾಶನದಿಂದ ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕ ಡಾ. ಚಂದ್ರಶೇಖರ ರುದ್ರಯ್ಯ ಯರವಿನತೆಲಿಮಠ ಅವರ `ಬೆಳಕಿನ ಸೆಳಕುಗಳು' ಗ್ರಂಥ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಗ್ರಂಥಾವಲೋಕನ ಮಾಡಿದ ನಿವೃತ್ತ ಪ್ರಾಚಾರ್ಯ ಶಿವಪುತ್ರಪ್ಪ ಆಶಿ ಮಾತನಾಡಿ, ಬೆಳಕಿನ ಸೆಳಕುಗಳು ೨೬ ಮಹನೀಯರ, ಆದರ್ಶ ಜೀವಿಗಳ ವ್ಯಕ್ತಿ ಚಿತ್ರಣ ಕಟ್ಟಿಕೊಡುತ್ತದೆ. ಮುಂದಿನ ಪೀಳಿಗೆಗೆ ಇದು ಆಕರ ಗ್ರಂಥ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ. ಎಸ್.ಆರ್. ರಾಮನಗೌಡರ ಮಾತನಾಡಿ, ನಾವು ಅಳಿದು ಹೋದರೂ ಸಮಾಜಮುಖಿ ಕೆಲಸ, ಕಾರ್ಯಗಳು ಶಾಶ್ವತವಾಗಿ ಉಳಿಯಬೇಕಾದರೆ ಅದು ಅಕ್ಷರ ರೂಪಕ್ಕೆ ಬರಬೇಕು ಎಂದರು.
ಪ್ರಣವ ಪ್ರಕಾಶನ ಅಧ್ಯಕ್ಷ ಪ್ರೊ. ಬಸಯ್ಯ ಶಿರೋಳ ಪ್ರಕಾಶಕರ ಪರ ನುಡಿಗಳನ್ನಾಡಿದರು. ವಿಶ್ರಾಂತ ಪ್ರಾಧ್ಯಾಪಕ ಡಾ. ಜಿ.ಎಂ. ಹೆಗಡೆ, ಕೃತಿಕಾರ ಪ್ರೊ. ಸಿ.ಆರ್. ಯರವಿನತೆಲಿಮಠ ವೇದಿಕೆಯಲ್ಲಿದ್ದರು.
ಡಾ. ಡಿ.ಎಂ. ಹಿರೇಮಠ, ಮಕ್ಕಳ ಹಿರಿಯ ಸಾಹಿತಿ ನಿಂಗಣ್ಣ ಕುಂಟಿ, ಶಿವಪುತ್ರಯ್ಯ ರಾಚಯ್ಯನವರ, ಡಾ. ಚಿದಾನಂದ ಮಾಸನಕಟ್ಟಿ, ಡಾ. ಬಾಳಣ್ಣ ಶೀಗೀಹಳ್ಳಿ, ಡಾ. ಮಲ್ಲಿಕಾರ್ಜುನ ಪಾಟೀಲ, ಸಿ.ಎಸ್. ಪಾಟೀಲ, ಪ್ರೊ. ಮೃತ್ಯುಂಜಯ ರಾಚಯ್ಯನವರ, ಎನ್.ಎಸ್. ಕಾಶಪ್ಪನವರ, ಎಸ್.ಐ. ಭಾವಿಕಟ್ಟಿ, ಈರಯ್ಯ ರಾಚಯ್ಯನವರ, ಆರ್.ಬಿ. ಪಟ್ಟಣಶೆಟ್ಟಿ, ಡಾ. ಬಾಳಪ್ಪ ಚಿನಗುಡಿ, ರುದ್ರಣ್ಣ ಚಿಲುಮಿ, ಎಸ್.ವಿ. ಅಯ್ಯನಗೌಡರ, ಶಂಕರ ಬೆಟಗೇರಿ, ಇತರರಿದ್ದರು.