

ಮಂಡ್ಯ: ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಕನ್ನಡ ಉಪನ್ಯಾಸಕರ ವೇದಿಕೆ ರಚಿಸಲಾಗಿದೆ. ಅದರಂತೆ ಲೋಕೇಶ್ ಬೆಕ್ಕಳಲೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು(ಮಾಜಿ ಪುರಸಭೆ)ಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪದಾಧಿಕಾರಿಗಳ ಘೋಷಣೆ ಮಾಡಲಾಯಿತು. ಚಂದ್ರಶೇಖರಯ್ಯ(ಗೌರವಾಧ್ಯಕ್ಷ), ಶಿವಾನಂದ(ಪ್ರಧಾನ ಕಾರ್ಯದರ್ಶಿ), ಪುಷ್ಪಲತಾ(ಕಾರ್ಯಾಧ್ಯಕ್ಷೆ), ಸೋಮಶೆಟ್ಟಿ(ಕೋಶಾಧ್ಯಕ್ಷೆ), ಗೌರಮ್ಮ(ಗೌರವ ಸಲಹೆಗಾರರು), ಶಿವಲಿಂಗೇಗೌಡ, ವಿನೋದ್, ಶ್ವೇತಾ(ಉಪಾಧ್ಯಕ್ಷರು), ಪ್ರಕಾಶ್, ಸರ್ವಶ್ರೀ, ಕೃಪಾಲತಾ(ಸಂಘಟನಾ ಕಾರ್ಯದರ್ಶಿಗಳು), ಮೃತ್ಯುಂಜಯ(ಪತ್ರಿಕಾ ಕಾರ್ಯದರ್ಶಿ) ಹಾಗೂ ವಿವಿಧ ತಾಲೂಕು ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಡಿಡಿಪಿಯು ಉಮೇಶ್, ವೇದಿಕೆಯು ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಪ್ರೀತಿ ಮತ್ತು ಕನ್ನಡ ನಾಡು-ನುಡಿಯ ಬಗ್ಗೆ ಅಭಿಮಾನವನ್ನು ಬೆಳೆಸುವಂತೆ ಕಾರ್ಯ ನಿರ್ವಹಿಸಬೇಕು. ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿ ಬಂದಿದೆ. ಶಾಸ್ತ್ರೀಯ ಸ್ಥಾನಮಾನ ಪಡೆದಿದೆ. ಹಾಗಾಗಿ ಕನ್ನಡ ವಿಷಯವನ್ನು ಬೋಧಿಸುವುದೇ ಸಂತೋಷದ ಸಂಗತಿ ಎಂದು ಅಭಿಪ್ರಾಯಪಟ್ಟರು.
ಪ್ರಾಂಶುಪಾಲ ಗುರುಲಿಂಗೇಗೌಡ, ಜಿಲ್ಲಾ ಉಪನ್ಯಾಸಕರ ಸಂಘದ ಪ್ರಧಾನ ಕಾರ್ಯದರ್ಶಿ ರವೀಂದ್ರ, ಕಾರ್ಯಾಧ್ಯಕ್ಷ ವೆಂಕಟೇಗೌಡ, ಜಿಲ್ಲಾ ಎನ್‌ಪಿಎಸ್ ಘಟಕದ ಅಧ್ಯಕ್ಷ ಸಿದ್ದರಾಜು ಇತರರಿದ್ದರು.