ಶಾಶ್ವತ ಸತ್ಯದ ವಿಸ್ತಾರವೇ ಸೃಷ್ಟಿ

21 vikram 3
????????????????????????????????????
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಸನಾತನ ಪದವು ಪ್ರಾಚಿನ ಮತ್ತು ಸಕಲಕ್ಕೂ ಆಧಾರವಾದ ಕಾರಣ ಚೈತನ್ಯವನ್ನು ಸೂಚಿಸುವುದು. ಶಾಶ್ವತ ಸತ್ಯದ ವಿಸ್ತಾರವೇ ಈ ಸೃಷ್ಟಿ ಎಂದು ಹಿರಿಯ ಚಿಂತಕ ಡಾ. ಶ್ರೀರಾಮ ಭಟ್ಟ ಅಭಿಪ್ರಾಯಪಟ್ಟರು.

ನಗರದ ಅನ್ವೇಷಣೆ ಕೂಟ ವತಿಯಿಂದ ಸಾಧನಕೇರಿ ಚೈತ್ರದ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ "ಸನಾತನ ಧರ್ಮ' ಕುರಿತು ವಿಶೇಷ ಉಪನ್ಯಾಸ ನೀಡಿದರು.

ಮಹಾಭಾರತ ಪ್ರತಿಭೆಯ ವೇದವ್ಯಾಸಮುನಿ ಈ ಸೃಷ್ಟಿಯ ಸಮಸ್ತ ಅವಯವಗಳ ಬದುಕನ್ನು ಎತ್ತಿ ಹಿಡಿದು ಸಲಹುವುದು ಧರ್ಮ. ಅದಲ್ಲದಿದ್ದರೆ ಅಧರ್ಮ ಎಂದು ಸನಾತನ ಧರ್ಮವನ್ನು ನಿರ್ವಚಿಸಿ ನಿರೂಪಿಸಿದ. ಈ ನೆಲದಲ್ಲಿ ಮುಂದೆ ಕಾಣಿಸಿಕೊಂಡ ಜೈನ, ಬೌದ್ಧ, ಇತರ ಅವೈದಿಕ ಧರ್ಮಗಳಲ್ಲೂ, ದೇಸಿ ಧರ್ಮ ಪಂಥಗಳಲ್ಲೂ ಸನಾತನ ಧರ್ಮ ಪದದ ಬಳಕೆ ಅರ್ಥಪೂರ್ಣವಾಗಿ ಕಾಣಿಸಿಕೊಂಡಿದೆ. ವೈವಿಧ್ಯಪೂರ್ಣ ಚರ್ಚೆ, ನಂಬಿಕೆ, ಆರಾಧನಾ ಪದ್ಧತಿಗಳಲ್ಲಿ ಸರ್ವರ ಹಿತ ಕಾಣುವುದು, ಸಾಧಿಸುವುದು ಧರ್ಮದ ಲಕ್ಷಣ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರೊ. ರಾಘವೇಂದ್ರ ಪಾಟೀಲ ಮಾತನಾಡಿದರು.

ಅನ್ವೇಷಣಕೂಟದ ಅಧ್ಯಕ್ಷ ನರಸಿಂಹ ಪರಾಂಜಪೆ, ವೆಂಕಟೇಶ ದೇಸಾಯಿ, ಡಾ. ಹ.ವೆಂ. ಕಾಖಂಡಕಿ, ಪ್ರೊ. ದುಷ್ಯಂತ ನಾಡಗೌಡ, ಶಶಿಧರ ತೋಡಕರ, ಸಿ.ಆರ್​. ಜೋಶಿ, ಪರಮೇಶ್ವರ ಎಂ.ಎಸ್​., ಎಂ.ಆರ್​. ಬಾಳಿಕಾಯಿ, ಮಹಾಬಲೇಶ್ವರ ಸಿಂದಗಿ, ಅರವಿಂದ ಕುಲಕರ್ಣಿ, ಶ್ರೀಪಾದ ನಾಡಿಗೇರ, ಎಸ್​.ಬಿ. ದ್ವಾರಪಾಲಕ, ಅನಂತ ಸಿದ್ದೇಶ್ವರ, ಎಸ್​.ಬಿ. ಹನುಮೇಶ, ಶ್ರೀನಿವಾಸ ವಾಡಪ್ಪಿ, ಎಂ.ಬಿ. ಸದಾನಂದ, ಡಾ. ಮಂದಾಕಿನಿ ಪುರೋಹಿತ, ಜಯಶ್ರೀ ಜೋಶಿ, ಸೀಮಾ ಪರಾಂಜಪೆ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net