ಪತ್ರಿಕೋದ್ಯಮದಿಂದ ಬೇರೆ ಬೇರೆ ಅವಕಾಶ ಸೃಷ್ಟಿ

gan (1)
Published on

ಕುಂದಾಪುರ: ಪತ್ರಿಕೋದ್ಯಮ ಸಾಕಷ್ಟು ಬದಲಾವಣೆ, ಪ್ರಗತಿ ಸಾಧಿಸಿದೆ. ಹಿಂದೆ ಪತ್ರಕರ್ತನ ಮುಂದೆ ಸಾಕಷ್ಟು ಸವಾಲುಗಳಿದ್ದವು. ಇಂದು ಆಧುನಿಕ ಜಗತ್ತು ಅವಕಾಶ, ಸೌಲಭ್ಯಗಳನ್ನು ಒದಗಿಸಿದೆ. ಪತ್ರಿಕೋದ್ಯಮ ವಿಪುಲವಾಗಿ ಬೆಳೆದಿದ್ದು, ಪತ್ರಿಕೋದ್ಯಮ ವ್ಯಾಸಂಗ ವಾಡಿದರೆ ಸಾಕಷ್ಟು ಅವಕಾಶಗಳು ಸೃಷ್ಟಿಯಾಗಿವೆ. ಇಂಜಿನಿಯರಿಂಗ್, ವೈದ್ಯಕೀಯ ಕ್ಷೇತ್ರ ವಾತ್ರ ವಿದ್ಯಾರ್ಥಿಗಳ ಆದ್ಯತೆಯಾಗಿರದೆ ಪತ್ರಿಕೋದ್ಯಮವನ್ನು ಆರಿಸಿಕೊಂಡರೆ ಉತ್ತಮ ಭವಿಷ್ಯವಿದೆ ಎಂದು ಹಿರಿಯ ಪತ್ರಕರ್ತ ಡಾ.ಸುಧಾಕರ ನಂಬಿಯಾರ್ ಹೇಳಿದರು.

ಕುಂದಾಪುರ ಭಂಡಾರ್ಕರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು, ಆಂತರಿಕ ಗುಣಮಟ್ಟ ಭರವಸೆ ಕೋಶ, ಕರ್ನಾಟಕ ವಾಧ್ಯಮ ಅಕಾಡೆಮಿ ಬೆಂಗಳೂರು, ಕುಂದಾಪುರ ಕಾರ್ಯನಿರತ ಪತ್ರಕರ್ತರ ಸಂ ಸಹಯೋಗದೊಂದಿಗೆ ಭಂಡಾರ್ಕರ್ಸ್ ಕಾಲೇಜಿನಲ್ಲಿ ಮಂಗಳವಾರ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾಲೇಜು ವಿಶ್ವಸ್ಥ ಮಂಡಳಿ ಉಪಾಧ್ಯಕ್ಷ ಕೆ.ಶಾಂತಾರಾಮ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಡಾ.ಸುಧಾಕರ ನಂಬಿಯಾರ್ ಅವರನ್ನು ಸನ್ಮಾನಿಸಲಾಯಿತು. ರೇಡಿಯೋ ಕುಂದಾಪ್ರದಲ್ಲಿ ನಿರ್ವಹಣೆ, ಪ್ರಸಾರ ಹಾಗೂ ತಾಂತ್ರಿಕವಾಗಿ ಸಹಕರಿಸುತ್ತಿರುವ ನಿರಂಜನ್ ಎಚ್.ಬಿ. ಅವರಿಗೆ ಪ್ರವಾಣಪತ್ರ ನೀಡಲಾಯಿತು.

ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂದ ಅಧ್ಯಕ್ಷ ನಾಗರಾಜ ರಾಯಪ್ಪನಮಠ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎಂ.ಗೊಂಡ, ಆಂತರಿಕ ಗುಣಮಟ್ಟ ಭರವಸೆ ಕೋಶ ಸಂಯೋಜಕ ಪ್ರೊ.ಸತ್ಯನಾರಾಯಣ ಉಪಸ್ಥಿತರಿದ್ದರು.

ಪ್ರಾಂಶುಪಾಲ ಡಾ.ಶುಭಾಕರಾಚಾರಿ ಸ್ವಾಗತಿಸಿದರು. ಕರ್ನಾಟಕ ವಾಧ್ಯಮ ಅಕಾಡೆಮಿ ಸದಸ್ಯ ಯು.ಎಸ್.ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಸುಮಲತಾ ನಾಯ್ಕ ಸನ್ಮಾನಿತರನ್ನು ಪರಿಚಯಿಸಿದರು. ಪತ್ರಕರ್ತರ ಸಂದ ಕಾರ್ಯದರ್ಶಿ ಗಣೇಶ ಬೀಜಾಡಿ ವಂದಿಸಿದರು. ಜ್ಯೋತಿ ಸಾಲಿಗ್ರಾಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net