ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆ ಪೂರಕ ವಾತಾವರಣ ನಿರ್ಮಾಣ

Kdb_competitive exam
Published on

ಕಡಬ: ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್ ತಾಲೂಕು ಘಟಕದ ಪದಗ್ರಹಣ ಕಾರ್ಯಕ್ರಮ ಕಡಬ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.

ಅಂಬೇಡ್ಕರ್ ಭಾವ ಚಿತ್ರಕ್ಕೆ ಪುಷ್ಪಾರ್ಚನೆಗೈದು, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಡಬ ಠಾಣಾ ತನಿಖಾ ವಿಭಾಗದ ಉಪನಿರೀಕ್ಷಕ ಅಕ್ಷಯ ಡವಗಿ, ಸಂಘಟನೆಗಳು ಹೋರಾಟದ ಜತೆಗೆ ಸಮುದಾಯದ ಜನರಿಗೆ ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿಯಾಗಲು ಪೂರಕ ವಾತಾವರಣ ನಿರ್ಮಿಸಬೇಕು ಎಂದರು.

ಸಂಘಟನೆ ರಾಜ್ಯ ಉಪಾಧ್ಯಕ್ಷ ಜಯಕುಮಾರ್ ಹಾದಿಗೆ ದಿಕ್ಸೂಚಿ ಭಾಷಣ ಮಾಡಿ, ಕರಾವಳಿ ಭಾಗದಲ್ಲಿ ನೀಲಿಪಡೆಗಳ ಹೆಜ್ಜೆ ಗುರುತು ಹೆಚ್ಚಾಗುತ್ತಿದೆ. ಅನ್ಯಾಯಕ್ಕೆ ಒಳಗಾದವರ ಧ್ವನಿಯಾಗಿ ಸಂವಿಧಾನಿಕ ಹಕ್ಕನ್ನು ಕೇಳಲು ಹಿಂಜರಿಯಬಾರದು ಎಂದರು.

ಸಂಘಟನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಆಯುಷ್ಮಾನ್ ಮತೀನ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮಲ್ಲಿ ದೂರದೃಷ್ಟಿತ್ವ ಇರಬೇಕು. ಪರಿಪೂರ್ಣ ಜ್ಞಾನ ಪಡೆದುಕೊಂಡು ಹೋರಾಟಕ್ಕೆ ಮುಂದಾಗಬೇಕು. ಸಮುದಾಯದ ಮೇಲೆ ದಬ್ಬಾಳಿಕೆ, ದೌರ್ಜನ್ಯ ನಡೆದಾಗ ದಲಿತರನ್ನೇ ಎತ್ತಿಕಟ್ಟಿ ಧಮನಿಸುವ ಪ್ರಯತ್ನ ನಡೆಯುತ್ತವೆ. ಈ ಬಗ್ಗೆ ತಿಳಿದುಕೊಂಡು ಖಂಡಿಸುವ ಎದೆಗಾರಿಕೆ ನಮ್ಮಲ್ಲಿರಬೇಕೆಂದರು.

ಹಾಸನ ಜಿಲ್ಲಾಧ್ಯಕ್ಷ ಪ್ರದೀಪ್ ಎಚ್.ಎಸ್., ದ.ಕ ಜಿಲ್ಲಾಧ್ಯಕ್ಷ ವಿವೇಕಾನಂದ ಶಿರ್ತಾಡಿ, ಹಾಸನ ಜಿಲ್ಲಾ ಉಪಾಧ್ಯಕ್ಷ ನವೀನ್ ಸಾಲಗಾಮೆ, ಹಾಸನ ತಾಲೂಕು ಅಧ್ಯಕ್ಷ ಹೇಮಂತ್ ಡಿ.ಕೆ., ಶಿಕ್ಷಕ ಶೇಖರ್ ಅತ್ನಿ, ಸುಳ್ಯ ತಾಲೂಕು ಅಧ್ಯಕ್ಷ ವಸಂತ್ ಕುದ್ದಾಜೆ, ಅಲೂರು ತಾಲೂಕು ಅಧ್ಯಕ್ಷ ಜಗದೀಶ್ ನಿಡನೂರು, ಧರ್ಮ ಪ್ರಚಾರಕ ದಿನೇಶ್ ಮುಳೂರು, ದಕ್ಷಿಣ ಕರ್ನಾಟಕ ಅಧ್ಯಕ್ಷ ಗಿರೀಶ್ ಕೆ.ಬಿ. ಉಪಸ್ಥಿತರಿದ್ದರು.

ಹಿರಿಯ ದಲಿತ ಮುಖಂಡ ತನಿಯಪ್ಪ ಬೆದ್ರೋಳಿ ಅವರನ್ನು ಸನ್ಮಾನಿಸಲಾಯಿತು. ಕಡಬ ಭೀಮ್ ಆರ್ಮಿ ಘಟಕ ಅಧ್ಯಕ್ಷ ರಾಘವ ಕಳಾರ ಪ್ರಾಸ್ತಾವಿಸಿದರು. ಶ್ರೀಲತಾ ಡಿ., ಸುಪ್ರಿತಾ ಡಿ. ಸಂವಿಧಾನ ಪೀಠಿಕೆ ಓದಿದರು. ವಿ.ಕೆ. ಕಡಬ ಸ್ವಾಗತಿಸಿದರು. ಮಹಾಬಲ ಪಟುಬೆಟ್ಟು ವಂದಿಸಿದರು. ಸಂದೀಪ್ ಪಾಂಜೋಡಿ ನಿರೂಪಿಸಿದರು.

ನೂತನ ಪದಾಧಿಕಾರಿಗಳ ಆಯ್ಕೆ

ಕಡಬ ತಾಲೂಕು ಘಟಕ ನೂತನ ಅಧ್ಯಕ್ಷರಾಗಿ ತಾರಾನಾಥ ಕಡಿರಡ್ಕ, ಉಪಾಧ್ಯಕ್ಷರಾಗಿ ಸುರೇಶ ತೋಟಂತಿಲ, ಕಾರ್ಯದರ್ಶಿಯಾಗಿ ಸುಂದರ ಪುರುಷಬೆಟ್ಟು, ಸಂಚಾಲಕರಾಗಿ ದಯಾನಂದ ಕಡಿರಡ್ಕ, ಸಂಘಟನಾ ಕಾರ್ಯದರ್ಶಿಯಾಗಿ ಲೋಕೇಶ್ ಕಡಿರಡ್ಕ, ಕೋಶಾಧಿಕಾರಿಯಾಗಿ ಯೋಗೀಶ್ ಕಡಿರಡ್ಕ, ಕಾರ್ಯದರ್ಶಿಯಾಗಿ ಮೋಹನ್ ಉಜುರ್ಲಿ ಅವರನ್ನು ಆಯ್ಕೆ ಮಾಡಿ ಸಂಸ್ಥಾಪಕ ರಾಜ್ಯಾಧ್ಯಕ್ಷರು ಆದೇಶ ಪತ್ರ ನೀಡಿದರು. ರಾಘವ ಕಳಾರ ಅವರನ್ನು ಜಿಲ್ಲಾ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net