ಜನ ರೊಚ್ಚಿಗೇಳುವ ಪರಿಸ್ಥಿತಿ ನಿರ್ಮಾಣ

SGN strike
Published on

ಶಿಗ್ಗಾಂವಿ: ರಾಜ್ಯ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳ ಮಾಡಿರುವುದನ್ನು ಖಂಡಿಸಿ ಪಟ್ಟಣದ ರಾಣಿ ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಗುರುವಾರ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕು ಮಂಡಲ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಮಾತನಾಡಿ, ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ರಾಜ್ಯ ಸರ್ಕಾರ ಅಗತ್ಯ ವಸ್ತುಗಳ ದರ ಹೆಚ್ಚಿಸುತ್ತಿದೆ. ಬರಗಾಲದಿಂದ ತತ್ತರಿಸಿರುವ ರೈತನಿಗೆ ಈಗಿನ ಮುಂಗಾರುವೇಳೆ ಉಚಿತವಾಗಿ ಬಿತ್ತನೆ ಬೀಜ ಪೂರೈಸಿ ನೆರವಾಗಬೇಕಾಗಿತ್ತು. ಆದರೆ ಅಗತ್ಯ ವಸ್ತು, ಬೀಜ, ಗೊಬ್ಬರ ಜತೆಗೆ ಇಂಧನ ಬೆಲೆ ಹೆಚ್ಚಿಸಿ ಜನ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಸರ್ಕಾರ ಇದೇ ನೀತಿ ಮುಂದುವರಿಸಿದರೆ ಜನ ದಂಗೆ ಏಳುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಶಿವಪ್ರಸಾದ ಸುರಗಿಮಠ, ಮಲ್ಲೇಶಪ್ಪ ಹರಿಜನ, ಸುಭಾಷ ಚೌಹಾಣ, ಪರಶುರಾಮ ಸೊನ್ನದ, ರೇಣುಕನಗೌಡ ಪಾಟೀಲ, ಕಾಶೀನಾಥ ಕಳ್ಳಿಮನಿ, ಕರಿಯಪ್ಪ ಕಟ್ಟಿಮನಿ, ರಾಜೇಶ ದೊಡ್ಡಮನಿ, ಶಶಿಧರ ಹೊನ್ನಣ್ಣನವರ, ಮಂಜುನಾಥ ಬ್ಯಾಹಟ್ಟಿ, ದೇವಣ್ಣ ಚಾಕಲಬ್ಬಿ, ಸೋಮಶೇಖರ ಗೌರಿಮಠ, ಕುಮಾರಸ್ವಾಮಿ ಹಿರೇಮಠ, ವೀಣಾ ಹಿರೇಮಠ, ಸಂತೋಷ ಆಲದಕಟ್ಟಿ, ಸಿದ್ದು ಆಡಿನ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net