

ಜಮಖಂಡಿ: ಮಣ್ಣು ಪರೀಕ್ಷಾ ಕೇಂದ್ರದಲ್ಲಿ ರೈತರ ಸಂಖ್ಯೆ ತೋರಿಕೆಗೆ ಆಗಬಾರದು, ಮಣ್ಣು ಪರೀಕ್ಷೆಯಿಂದ ರೈತರಿಗೆ ಎಷ್ಟೆಲ್ಲ ಸಹಕಾರಿಯಾಗಿರುತ್ತದೆ ಎನ್ನುವುದನ್ನು ಜಾಗತಿ ಮೂಡಿಸುವ ಕಾರ್ಯ ಮಾಡಿ ಎಂದು ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಹೇಳಿದರು.
ನಗರದ ಮಣ್ಣು ಆರೋಗ್ಯ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿ ಅವರು ಮಾತನಾಡಿದರು. ಮಣ್ಣು ಪರೀಕ್ಷೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಿ. ದೃಢೀಕರಣ ಮಾಡುವುದರಿಂದ ರೈತರಿಗೆ ಖಾತ್ರಿಯಾಗುತ್ತದೆ. ಇದರಿಂದ ರೈತರ ಜಮೀನುಗಳಲ್ಲಿ ಬದಲಾವಣೆ ಕಂಡು ಬಂದರೆ ಅದು ನಿಮ್ಮ ಕೊಡುಗೆಯಿಂದಾಗುತ್ತದೆ ಎಂದರು.
ರಾಸಾಯನಿಕ ವಸ್ತುಗಳನ್ನು ಸ್ಟಾಕ್ ಇಟ್ಟುಕೊಂಡು ಕುಳಿತರೆ ಸಾಲದು. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಾಗತಿ ಮೂಡಿಸುವುದರೊಂದಿಗೆ ವ್ಯಾಪಕ ಪ್ರಚಾರ ಮಾಡಬೇಕು ಎಂದರು.
ಸಂಚಾರಿ ವಾಹನವನ್ನು ಬಳಸಿಕೊಳ್ಳಿ. ರೈತರ ಸಂಖ್ಯೆ ಹೇಳಿದರೆ ಸಾಲದು. ಬದಲಾಗಿ ರೈತರ ಜಮೀನುಗಳ ಮಣ್ಣು ಪರೀಕ್ಷೆಯಿಂದ ಏನೆಲ್ಲ ಅನುಕೂಲವಾಗುತ್ತದೆ ಎಂದು ತಿಳಿಹೇಳಿ ಎಂದರು.
ಜಮಖಂಡಿ ಮಣ್ಣು ಆರೋಗ್ಯ ಕೇಂದ್ರದ ಅಧಿಕಾರಿ, ಸಿಬ್ಬಂದಿಗೆ ಸಿಇಒ ಪ್ರಶಂಸನಾ ಪತ್ರ ವಿತರಿಸಿದರು.
ಗ್ರಾಪಂ ಸ್ಥಳಾಂತರ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪುನರ್ವಸತಿ ಕೇಂದ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ಜನರು ಸ್ಥಳಾಂತರವಾದರೆ ಗ್ರಾಪಂ ಕಚೇರಿಗಳನ್ನು ಸ್ಥಳಾಂತರ ಮಾಡಲಾಗುವುದು. ಪುನರ್ವಸತಿಗಳಲ್ಲಿ ಬಹಳಷ್ಟು ಮೂಲಸೌಲಭ್ಯಗಳು ಆಗಬೇಕಿದೆ. ಶೇ.50ರಷ್ಟು ಜನರು ಸ್ಥಳಾಂತರವಾಗಿದ್ದರೆ ಗ್ರಾಪಂ ಕಚೇರಿ ನಿರ್ಮಿಸಲು ಅನುದಾನದ ಕೊರತೆ ಇಲ್ಲ. ನರೇಗಾ ಹಣ ಬಳಸಿಕೊಳ್ಳಲು ಅವಕಾಶ ಇದೆ ಎಂದರು. ತಾಪಂ ಇಒ ಸಂಜೀವ ಜುನ್ನೂರ, ಉಪ ಕಷಿ ನಿರ್ದೇಶಕ ಕೆ.ಎಸ್.ಅಗಸನಾಳ, ಸಹಾಯಕ ಕಷಿ ನಿರ್ದೇಶಕ ಸಿದ್ದಪ್ಪ ಪಟ್ಟಿಹಾಳ, ಎಂ.ಆರ್.ನಾಗೂರ, ಎಂ.ಎಸ್.ಬುಜರುಕ, ರಮೇಶ ಪಡಸಲಗಿ ಇತರರು ಇದ್ದರು.