

ಸಂಡೂರು: ವಿದ್ಯಾರ್ಥಿಗಳು ಸೋಲು-ಗೆಲುವು ಎನ್ನದೇ ಎಲ್ಲ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯದರ್ಶಿ ಜಿ.ಎಸ್.ಸೋಮಪ್ಪ ಹೇಳಿದರು.
ಪಟ್ಟಣದ ಎಸ್‌ಇಎಸ್ ಪ್ರಾಥಮಿಕ ಶಾಲೆ ಮತ್ತು ಛತ್ರಪತಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ದೇಶ ಭಕ್ತಿಗೀತೆ ಗಾಯನ ಸ್ಪರ್ಧೆ ಮತ್ತು ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು.
ಜೀವನದಲ್ಲಿ ಶಿಸ್ತು, ಪ್ರಾಮಾಣಿಕತೆ, ಇತರರಿಗೆ ಸಹಾಯ ಮಾಡುವುದು ಸ್ಕೌಟ್ಸ್ ಮತ್ತು ಗೈಡ್ಸ್ ಉದ್ದೇಶವಾಗಿದೆ. ಮಕ್ಕಳಲ್ಲಿ ದೇಶ ಭಕ್ತಿ, ಶಾಂತಿ, ಸಹನೆ, ಸೌಹಾರ್ದ ಮೂಡಿಸುವುದು ಶಿಕ್ಷಕರ ಕರ್ತವ್ಯವಾಗಿದೆ ಎಂದರು.
ಗೀತ ಗಾಯನ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ, ಪ್ರಮಾಣ ಪತ್ರ ನೀಡಲಾಯಿತು. ಇಸಿಒ ಬಸವರಾಜ್, ಮುಖ್ಯಶಿಕ್ಷಕರಾದ ಕಲ್ಲಯ್ಯ ಮಠ, ಬಾಬುಗೌಡ ಗುರೆಡ್ಡಿ,
ಪ್ರಮುಖರಾದ ಮಲ್ಲೇಶ್ವರಿ ಜೂಜರಿ, ಮಹಮದ್ ಬಾಷಾ, ಮಹಮದ್ ಜಾವೇದ್, ಚಂದ್ರಯ್ಯ ಮಠ, ಚಂದ್ರಶೇಖರ್ ರೆಡ್ಡಿ, ಶಿಕ್ಷಕರಾದ ಶ್ರೀಧರ್, ಗಾಂಧಿ, ರೂಪಾ ರಾಯಚೂರು, ನಾಗವೇಣಿ, ಎರ‌್ರಿಸ್ವಾಮಿ, ದಿವಾಕರ ಇದ್ದರು.