

ಶಿರಾ : ಗ್ರಾಮೀಣ ಜಾನಪದ ಕಲೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಕೊಡುವುದು ನಮ್ಮೆಲ್ಲರ ಕರ್ತವ್ಯ ಎಂದು ನಗರಸಭೆ ಸದಸ್ಯ ಆರ್.ಉಗ್ರೇಶ್ ತಿಳಿಸಿದರು.
ಸರ್ಕಾರಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಜಾನಪದ ಉತ್ಸವ 2025 ಅನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಜನರು ಅಂದಿನ ಕಾಲಘಟ್ಟದಲ್ಲಿ ಮನರಂಜನೆಗೆ, ಬದುಕಿನ ನೋವು&-ನಲಿವನ್ನು ಪದ ಮಾಡಿ ಹಾಡುತ್ತಿದ್ದರು. ನೃತ್ಯದ ಮೂಲಕ ಗ್ರಾಮೀಣ ಸಂಸತಿ ಬಿಂಬಿಸಿದಾರೆ ಎಂದರು.
ನಗರಸಭೆ ಸದಸ್ಯ ಎಸ್.ಎಲ್.ರಂಗನಾಥ ಮಾತನಾಡಿ, ಕರ್ನಾಟಕ ಜಾನಪದ ಲೋಕದಲ್ಲಿ ಜಾನಪದ ನೃತ್ಯಗಳಾದ ಡೊಳ್ಳು ಕುಣಿತ, ವೀರಗಾಸೆ, ಕಂಸಾಳೆ, ಪೂಜಾ ಕುಣಿತ, ಹುಲಿವೇಷ ಇಂದಿಗೂ ಜೀವಂತವಾಗಿವೆ. ಆದರೂ ಕೊರವ, ಗೊರವರ ಕುಣಿದಂತ ಹಲವು ನೃತ್ಯ ಅಳಿವಿನಂಚಿಗೆ ತಲುಪಿದೆ. ಸಂಘ&ಸಂಸ್ಥೆಗಳು ಅವುಗಳನ್ನು ಮುಂದಿನ ಪಿಳಿಗೆಗೆ ಉಳಿಸಬೇಕು ಎಂದರು.
ಪ್ರಾಂಶುಪಾಲ ಚಂದ್ರಶೇಖರಪ್ಪ ಮಾತನಾಡಿ, ಯುವಕರಲ್ಲಿ ಜಾನಪದ ಆಸಕ್ತಿ ಮೂಡಿಸಲು ಕರ್ನಾಟಕ ಸರ್ಕಾರ ರಾಜ್ಯದ ಕಾಲೇಜುಗಳಲ್ಲಿ ಜಾನಪದ ಉತ್ಸವ ಆಚರಿಸಲು ಅವಕಾಶ ಕಲ್ಪಿಸಿದೆ ಎಂದರು.
ಉಪನ್ಯಾಸಕರು, ವಿದ್ಯಾರ್ಥಿಗಳು ಜಾನಪದ ಉಡುಪಾದ ಪಂಚೆ, ಶರ್ಟ್ ಹಾಗೂ ಸೀರೆಯನ್ನು ಧರಿಸಿದ್ದರು. ಎತ್ತಿನಗಾಡಿಯ ಮೂಲಕ ಮೆರವಣಿಗೆ ನಡೆಸಲಾಯಿತು. ವಿದ್ಯಾರ್ಥಿಗಳು ಜಾನಪದ ಇತಿಹಾಸಕ್ಕೆ ಸಂಬಂಧಿಸಿದ ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರು.
ಹೊನ್ನಾಂಜನಯ್ಯ, ತಿರುಮಲ, ಸುಕನ್ಯಾ, ಬಾಳಪ್ಪ, ತಿಪ್ಪೇಸ್ವಾಮಿ, ಕಾವ್ಯಾ, ಪ್ರಭಾಸ್ ಪಂಡಿತ್, ಕುಮಾರ್, ವಿಜಯ್ ಕುಮಾರ್, ನಳಿನ, ತಿಮ್ಮರಾಜು, ಹರೀಶ್, ಹರ್ಷ, ಗುಡ್ಡಣ್ಣ, ಇದ್ದರು.