ಮಕ್ಕಳಲ್ಲಿ ಆರೋಗ್ಯ ಜಾಗೃತಿ ಮೂಡಿಸಿ

ಅಳವಂಡಿ ಎಸ್‌ಎಸ್‌ಪಿಯು ಕಾಲೇಜಿನಲ್ಲಿ ಡೆಂೆ ಜನ ಜಾಗೃತಿ ಕಾರ್ಯಕ್ರಮದಲ್ಲಿ ಜಿಲ್ಲಾ ಕೀಟಜನ್ಯ ರೋಗ ಸಲಹೆಗಾರ ಕೆ.ರಮೇಶ, ಆರೋಗ್ಯ ನೀರಿಕ್ಷಣಾ ಅಧಿಕಾರಿಗಳಾದ ಬೀಮಣ್ಣ, ಅಬ್ಬಾಸ್, ರವೀಂದ್ರ ಕಮ್ಮಾರ, ಹಿರಿಯ ಶಿಕ್ಷಕ ಹನುಮಂತ ಲಮಾಣಿ ಇತರರಿದ್ದರು.
ಅಳವಂಡಿ ಎಸ್‌ಎಸ್‌ಪಿಯು ಕಾಲೇಜಿನಲ್ಲಿ ಡೆಂೆ ಜನ ಜಾಗೃತಿ ಕಾರ್ಯಕ್ರಮದಲ್ಲಿ ಜಿಲ್ಲಾ ಕೀಟಜನ್ಯ ರೋಗ ಸಲಹೆಗಾರ ಕೆ.ರಮೇಶ, ಆರೋಗ್ಯ ನೀರಿಕ್ಷಣಾ ಅಧಿಕಾರಿಗಳಾದ ಬೀಮಣ್ಣ, ಅಬ್ಬಾಸ್, ರವೀಂದ್ರ ಕಮ್ಮಾರ, ಹಿರಿಯ ಶಿಕ್ಷಕ ಹನುಮಂತ ಲಮಾಣಿ ಇತರರಿದ್ದರು.
Published on

ಅಳವಂಡಿ: ಗುಂಡಿಗಳಲ್ಲಿ ಮಳೆ ನೀರು ನಿಲ್ಲುವುದರಿಂದ ಸಾಂಕ್ರಾಮಿಕ ರೋಗಗಳ ಹಾವಳಿ ಹೆಚ್ಚಾಗಲಿದೆ. ಆದ್ದರಿಂದ ಶಿಕ್ಷಕರು ಮಕ್ಕಳಲ್ಲಿ ಆರೋಗ್ಯ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಕೀಟಜನ್ಯ ರೋಗ ಸಲಹೆಗಾರ ಕೆ.ರಮೇಶ ಹೇಳಿದರು.

ಗ್ರಾಮದ ಶ್ರೀ ಸಿದ್ಧೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಅಳವಂಡಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಶನಿವಾರ ಹಮ್ಮಿಕೊಂಡಿದ್ದ ಡೆಂೆ ಜನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸೊಳ್ಳೆಗಳಿಂದ ಸಾಂಕ್ರಾಮಿಕ ರೋಗಗಳು ಹೆಚ್ಚಾಗಲಿದ್ದು, ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತವೆ. ರೋಗದ ಲಕ್ಷಣ ಕಂಡುಬಂದರೆ ತಕ್ಷಣ ರಕ್ತ ತಪಾಸಣೆ ಮಾಡಿಸಿ ಸೂಕ್ತ ಚಿಕಿತ್ಸೆ ಪಡೆಯಿರಿ. ಸೊಳ್ಳೆ ಕಡಿತ ಚಿಕ್ಕದಾದರು ಅದರ ಪರಿಣಾಮ ದೊಡ್ಡದು. ಸೊಳ್ಳೆಗಳ ನಿಯಂತ್ರಣಕ್ಕೆ ಮನೆಯಲ್ಲಿ ಸಂಗ್ರಹಿಸಿದ ನೀರನ್ನು ಪದೇ ಪದೆ ಬದಲಿಸಬೇಕು. ಸುತ್ತಲೂ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದರು.

ಆರೋಗ್ಯ ನೀರಿಕ್ಷಣಾ ಅಧಿಕಾರಿಗಳಾದ ಬೀಮಣ್ಣ, ಅಬ್ಬಾಸ್, ರವೀಂದ್ರ ಕಮ್ಮಾರ, ಹಿರಿಯ ಶಿಕ್ಷಕ ಹನುಮಂತ ಲಮಾಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net