

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಎಸ್ಡಿಎಂ ವೈದ್ಯಕಿಯ ಕಾಲೇಜು ಮತ್ತು ಎನ್ಎಸ್ಎಸ್ ಟಕ ವತಿಯಿಂದ ಇಲ್ಲಿನ ಎಸ್ಡಿಎಂ ವೈದ್ಯಕಿಯ ಕಾಲೇಜಿನಲ್ಲಿ ಪರಿಸರ ದಿನವನ್ನು ಇತ್ತೀಚೆಗೆ ಆಚರಿಸಲಾಯಿತು.
ಪರಿಸರವಾದಿ ಡಾ. ಚಿದಾನಂದ ರಾಮನಗೌಡರ ಮಾತನಾಡಿ, ಪ್ರತಿಯೊಬ್ಬರು ಪ್ರಕೃತಿ ಸಂರಸಲು ತಮ್ಮ ಸುತ್ತಮುತ್ತ ಸಸಿಗಳನ್ನು ನೆಟ್ಟು ಉತ್ತಮವಾಗಿ ಬೆಳೆಸಬೇಕು. ಶುದ್ಧ ಗಾಳಿ ಮತ್ತು ನೀರನ್ನೊಳಗೊಂಡ ಪರಿಸರವು ಮಾನವನಿಗೆ ಪ್ರಥಮ ಪ್ರಾಶಸದ ಔಷಧವಾಗಿದೆ. ಪರಿಸರ ದಿನ ಆಚರಿಸುವುದರಿಂದ ನಾವು ಯುವ ಪೀಳಿಗೆಗೆ ಪರಿಸರದ ಅರಿವು ಮತ್ತು ಜಾಗೃತಿ ಮೂಡಿಸಬಹುದು ಎಂದರು.
ಪರಿಸರದ ಅಸಮತೋಲನವು ತಾಪಮಾನ ಮತ್ತು ಹವಾಮಾನದ ವೈಪರಿತ್ಯತೆಗೆ ಕಾರಣವಾಗಿ ಮಾನವರ ಮೇಲೆ ಅತೀವ ಪರಿಣಾಮ ಉಂಟು ಮಾಡುತ್ತದೆ. ದೇವರ ಕೊಡುಗೆಯಾದ ಹಸಿರು ಎಲೆಗಳು ಉತ್ತಮ ಆಮ್ಲಜನಕ ಕೊಡುವುದರಿಂದ ಅದರ ರಣೆಯು ಅವಶ್ಯಕ. ಜನರಿಂದ ಪರಿಸರ ನಿಯಂತ್ರಿಸಲು ಸಾಧ್ಯವಿಲ್ಲ. ಹೊರತಾಗಿ ಪರಿಸರವೇ ನಮ್ಮನ್ನು ನಿಯಂತ್ರಿಸುತ್ತದೆ ಎಂದರು.
ಎಸ್ಡಿಎಂ ವಿವಿ ಉಪ ಕುಲಪತಿ ಡಾ. ನಿರಂಜನ ಕುಮಾರ, ಕಾಲೇಜಿನ ಉಪ ಪ್ರಾಂಶುಪಾಲ ಡಾ. ವಿಜಯ ಕುಲಕಣಿರ್, ಪ್ರಾಂಶುಪಾಲೆ ಡಾ. ರತ್ನಮಾಲಾ ದೇಸಾಯಿ, ಉಪ ಪ್ರಾಂಶುಪಾಲ ಡಾ. ದೀಪಕ ಕಣಬೂರ, ಎನ್ಎಸ್ಎಸ್ ಟಕದ ಸಂಯೋಜಕ ಡಾ. ರಾಕೇಶ ನಾಯಕ, ವಿವಿ ಸಾರ್ವಜನಿಕ ಸಂಪರ್ಕಾಧಿಕಾರಿ ಬಾಬಣ್ಣ ಶೆಟ್ಟಿಗಾಗಿ, ವಿದ್ಯಾಥಿರ್ಗಳು, ಸಿಬ್ಬಂದಿ, ವಿದ್ಯಾಥಿರ್ಗಳು, ಇತರರು ಇದ್ದರು.