ನಾಗರಿಕರಿಗೆ ಸ್ವಚ್ಛತೆ ಅರಿವು ಮೂಡಿಸಿ

Create cleanliness awareness among citizens
ಲೋಕಾಪುರ ಪಟ್ಟಣ ಪಂಚಾಯಿತಿ ಕಾರ್ಯಾಲಯ ಆವರಣದಲ್ಲಿ ನಮಸ್ತೆ ದಿನಾಚರಣೆ ಕಾರ್ಯಕ್ರಮ ನಡೆಯಿತು. ಪಪಂ ಮುಖ್ಯಾಧಿಕಾರಿ ಸಾಬಣ್ಣ ಪೂಜರಿ, ಆರೋಗ್ಯ ನಿರೀಕ್ಷಕಿ ಭಾಗ್ಯಶ್ರೀ ಪಾಟೀಲ ಇತರರಿದ್ದರು.
Published on

ಲೋಕಾಪುರ : ಪಟ್ಟಣ ಪಂಚಾಯಿತಿ ಕಾರ್ಯಾಲಯ ಆವರಣದಲ್ಲಿ ಬುಧವಾರ ನಮಸ್ತೆ ದಿನಾಚರಣೆ ಕಾರ್ಯಕ್ರಮ ಜರುಗಿತು.

ಪಪಂ ಮುಖ್ಯಾಧಿಕಾರಿ ಸಾಬಣ್ಣ ಪೂಜಾರಿ ಮಾತನಾಡಿ, ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ ಶುಚಿಗೊಳಿಸುವ ಕಾರ್ಮಿಕರಿಗೆ ಮತ್ತು ನಾಗರಿಕರಿಗೆ ಅರಿವು ಮೂಡಿಸುವ ನಮಸ್ತೆ ದಿನಾಚರಣೆ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು. ಕಾರ್ಮಿಕರ ಸುರಕ್ಷತೆ ಮತ್ತು ಘನತೆಯನ್ನು ಕಾಪಾಡುವುದು, ಸ್ವಚ್ಛತೆ ಕುರಿತು ಮತ್ತು ಸುರಕ್ಷಾ ಪರಿಕರಗಳ ಬಳಕೆ ಕುರಿತು ಸಿಬ್ಬಂದಿಗಳಿಗೆ ತಿಳಿವಳಿಕೆ ನೀಡಿದರು.

ಪ.ಪಂ. ಆರೋಗ್ಯ ನಿರೀಕ್ಷಕಿ ಭಾಗ್ಯಶ್ರೀ ಪಾಟೀಲ, ಪೌರ ಕಾರ್ಮಿಕರು, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net