ಯುವ ಜನರಲ್ಲಿ ಸಾಹಿತ್ಯದ ಅರಿವು ಮೂಡಿಸಿ

nrpn 2..
Published on

ಎನ್.ಆರ್.ಪುರ: ಕನ್ನಡ ಸಾಹಿತ್ಯ ಪರಿಷತ್ ಯುವ ಜನರಲ್ಲಿ ಸಾಹಿತ್ಯದ ಬಗ್ಗೆ ಅರಿವು ಮೂಡಿಸಲಿದೆ ಎಂದು ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ಪೂರ್ಣೇಶ್ ಹೇಳಿದರು.

ಮುತ್ತಿನಕೊಪ್ಪದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ನಡಿಗೆ ಶಾಲಾ ಕಾಲೇಜುಗಳ ಕಡೆಗೆ ಕಾರ್ಯಕ್ರಮದಡಿ ಆಯೋಜಿಸಿದ್ದ ಮಕ್ಕಳಿಗೆ ಕನ್ನಡ ರಸಪ್ರಶ್ನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಯುವ ಜನರಲ್ಲಿ ಕನ್ನಡದ ಬಗ್ಗೆ ಪ್ರೀತಿ ಮೂಡಿಸುವ ಹಾಗೂ ಹೆಚ್ಚು ಯುವಕರನ್ನ ಸಾಹಿತ್ಯ ಪರಿಷತ್‌ಗೆ ಸೆಳೆಯುವ ಕಾರ್ಯ ಮಾಡಲಿದೆ ಎಂದರು.

ಕಾಲೇಜು ಪ್ರಾಚಾರ್ಯ ಶಶಿಧರ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್‌ನಿಂದ ಮಕ್ಕಳಲ್ಲಿ ಹೆಚ್ಚು ಜ್ಞಾನ ತುಂಬುವ ಕೆಲಸ ನಡೆಸಲಾಗುತ್ತಿದೆ. ಮಕ್ಕಳು ಸಂಸ್ಕಾರಯುತರಾಗಿ, ಸಂಸ್ಕೃತಿ ಉಳ್ಳವರಾಗಿ ಸದಾ ಸಾಹಿತ್ಯಕ ಚಟುವಟಿಕೆಗಳಲ್ಲಿ ಮುಂದೆ ಬಂದು ತಮ್ಮ ಹೆಸರು ಅಜರಾಮರವಾಗಿ ಉಳಿಯುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಕನ್ನಡದಲ್ಲಿ ಪೂಣಾರ್ಂಕ ಪಡೆದ ಕೆ.ಎಸ್.ಅನು, ಕೆ.ಎಸ್.ನಂದಿತಾ, ಜಿ.ದಿವ್ಯ, ಹುಮೆಹಾಬೀಬಾ ಅವರಿಗೆ ಕನ್ನಡ ಕಣ್ಮಣಿ ಬಿರುದು ಕೊಟ್ಟು ಸನ್ಮಾನಿಸಲಾಯಿತು. ಕನ್ನಡ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಕಿರಣ್ ತಂಡ ಪ್ರಥಮ, ಸಾಹಿಮತಾಜ್ ತಂಡ ದ್ವಿತೀಯ, ದಾಮೋದರ್ ತಂಡ ತೃತೀಯ, ಮೋನಿಕಾ ತಂಡ ಸಮಾಧಾನಕರ ಬಹುಮಾನ ಪಡೆದರು. ಕನ್ನಡ ಉಪನ್ಯಾಸಕ ಪಿ.ಜಿ.ವರ್ಗಿಸ್ ಅವರನ್ನು ಸನ್ಮಾನಿಸಲಾಯಿತು. ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಖಜಾಂಚಿ ಪೂರ್ಣಿಮಾ ಮಧು, ಮುಖ್ಯಶಿಕ್ಷಕ ಗಂಗಾಧರಪ್ಪ, ಸನ್ಮತಿ ರಕ್ಷಿತ್‌ಗೌಡ ಕೋಶಾಧ್ಯಕ್ಷೆ ರೇಖಾ ಮೋಹನ್, ಸಚಿನ್, ಸ್ವಾತಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net