ಮಕ್ಕಳಲ್ಲಿ ಜಾನಪದದ ಅರಿವು ಮೂಡಿಸಿ

Create awareness of folklore among children
ಕೆರೂರ ಪಟ್ಟಣದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಜಾನಪದ ಸೊಗಸು ಕಾರ್ಯಕ್ರಮವನ್ನು ದಿನೇಶ ಹೆಗಡೆ, ಡಾ.ಎಂ.ಪಿ ಚಂದ್ರಿಕಾ ಕುರಂದರವಾಡ ಉದ್ಘಾಟಿಸಿದರು. ರಮೇಶ ಬೇಲಾಳ, ಸುರೇಶ ಬೆಲಾಳ, ಪೀತಾಂಬ್ರಪ್ಪ ಹವೇಲಿ, ಸಿ.ಎಸ್. ಗೌಡರ ಮತ್ತಿತರರಿದ್ದರು.
Published on

ಕೆರೂರ : ಮಕ್ಕಳಿಗೆ ಶಿಕ್ಷಣದ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಜಾನಪದದ ಬಗ್ಗೆ ಅರಿವು ಮೂಡಿಸಬೇಕು ಎಂದು ರಾಷ್ಟ್ರೋತ್ಥಾನ ಪರಿಷತ್‌ನ ಕಾರ್ಯದರ್ಶಿ ದಿನೇಶ ಹೆಗಡೆ ಹೇಳಿದರು.

ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಜಾನಪದ ಸೊಗಸು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಡಾ.ಎಂ.ಪಿ ಚಂದ್ರಿಕಾ ಕುರಂದರವಾಡ ಮಾತನಾಡಿ, ಪಾಲಕರು ಮತ್ತು ಶಿಕ್ಷಕರ ಮಾರ್ಗದರ್ಶನವಿಲ್ಲದೆ ಮಕ್ಕಳು ಕಲಿಯಲು ಸಾಧ್ಯವಿಲ್ಲ. ಶಿಕ್ಷಕರು ಅವರ ವ್ಯಕ್ತಿತ್ವ ರೂಪಿಸಿ, ರಾಷ್ಟ್ರಾಭಿಮಾನ ಬೆಳಸಬೇಕು ಎಂದರು.

ವಿದ್ಯಾರ್ಥಿಗಳಿಂದ ಮಲೆನಾಡ ಮೂಲೆ ನಾಗ, ಯಕ್ಷಗಾನ, ಮೂಡಲ್ ಕುಣಿಗಲ್ ಕೆರೆ, ಪಟ ಕುಣಿತ, ವೀರಗಾಸೆ, ಸಿದ್ಧಿ ಕುಣಿತ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ರಮೇಶ ಬೇಲಾಳ, ಸುರೇಶ ಬೆಲಾಳ, ಪೀತಾಂಬ್ರಪ್ಪ ಹವೇಲಿ, ಸಿ.ಎಸ್. ಗೌಡರ, ಶಾಲೆ ಮುಖ್ಯ ಶಿಕ್ಷಕಿ ನೀಲಕಂಠೇಶ್ವರಿ, ಶಿವಲಿಲಾ ಗಂಗಲ್, ಶಾರದಾ ಭಗವತಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net