ಕಲೆ, ಸಾಹಿತ್ಯ, ಸಾಂಸ್ಕೃತಿಕ ಮೌಲ್ಯದ ಅರಿವು ಮೂಡಿಸಿ

25sri-1
Published on

ಶೃಂಗೇರಿ: ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆ ಕಲೆ, ಸಾಹಿತ್ಯ, ಸಾಂಸ್ಕೃತಿಕ ಮೌಲ್ಯಗಳ ಅರಿವು ಮೂಡಿಸಿದಾಗ ಮಾತ್ರ ಅವರ ಅಂತರಂಗದ ಸಾಮರ್ಥ್ಯದ ಜತೆ ಮನೋವಿಕಾಸ ಬೆಳವಣಿಗೆ ಕಾಣಲು ಸಾಧ್ಯ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಶಿಕ್ಷಣ ಇಲಾಖೆ, ಜಿಪಂ, ತಾಪಂ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಆಯೋಜಿಸಿದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಉದ್ಘಾಟಿಸಿ ಮಾತನಾಡಿದರು.

ಚಿಕ್ಕಮಕ್ಕಳ ಮನಸ್ಸು ಸದಾ ವಿನೂತನ ವಿಷಯದ ಕುರಿತು ಆಸಕ್ತಿ ಬೆಳೆಸಿಕೊಂಡಿರುತ್ತದೆ. ಅವರೊಳಗಿನ ಕ್ರಿಯಾಶೀಲತೆಗೆ ಪ್ರೋತ್ಸಾಹ ನೀಡುವುದು ಪಾಲಕರು ಹಾಗೂ ಶಿಕ್ಷಕರ ಗುರುತರ ಜವಾಬ್ದಾರಿ. ನೃತ್ಯ, ಗೀತೆಗಳು, ಪ್ರಬಂಧ, ವಸ್ತು ಪ್ರದರ್ಶನ ಇತ್ಯಾದಿ ಸ್ಪರ್ಧೆಗಳನ್ನು ಪ್ರತಿಭಾ ಕಾರಂಜಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಸೂಕ್ತ ವಿಭಾಗದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಪರಿಜ್ಞಾನ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು. ಸಾಂಸ್ಕೃತಿಕ ವೇದಿಕೆಗಳು ಅವರಲ್ಲಿ ಸಮನ್ವಯತೆ, ಸಾಂಕ ಮನೋಭಾವ ಬೆಳೆಯಲು ಪೂರಕ ವಾತಾವರಣ ಕಲ್ಪಿಸುತ್ತದೆ ಎಂದರು.

ಇಒ ಸುದೀಪ್, ಆಡಳಿತಾಧಿಕಾರಿ ಶಿವಕುಮಾರ್, ವಿದ್ಯಾರಣ್ಯಪುರ ಗ್ರಾಪಂ ಅಧ್ಯಕ್ಷ ಪ್ರವೀಣ್‌ಪೂಜಾರಿ, ಉಪಾಧ್ಯಕ್ಷೆ ಸುನೀತಾ, ಬಿಒ ಎನ್.ಜಿ.ರಾಘವೇಂದ್ರ, ಎಸ್‌ಡಿಎಂಸಿ ಅಧ್ಯಕ್ಷ ಆನಂದಸ್ವಾಮಿ, ಮರ್ಕಲ್ ಗ್ರಾಪಂ ಅಧ್ಯಕ್ಷ ಮಹೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net