ಸೊಳ್ಳೆಗಳ ನಿಯಂತ್ರಣಕ್ಕೆ ಜಾಗೃತಿ ಮೂಡಿಸಿ

Untitled design (3)
ತೋರಣಗಲ್‌ನಲ್ಲಿ ಶನಿವಾರ ವಿಶ್ವ ಸೊಳ್ಳೆ ದಿನಾಚರಣೆ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು. ಬಿಎಚ್‌ಇಒ ಶಿವಪ್ಪ, ಗ್ರಾಪಂ ಸದಸ್ಯ ಹನುಮಂತಪ್ಪ, ಸಿಬ್ಬಂದಿ ಅಬ್ದುಲ್ ಸುಕೂರ್ ಸಾಬ್, ಪ್ರಶಾಂತ್ ಕುಮಾರ್ ಇದ್ದರು.
Published on

ಸಂಡೂರು: ತೋರಣಗಲ್ ಸುತ್ತ ಕಾರ್ಖಾನೆಗಳು ಹೆಚ್ಚಿರುವುದರಿಂದ ಸೊಳ್ಳೆಗಳ ಉಪಟಳವೂ ಇರಲಿದ್ದು, ನಿಯಂತ್ರಣಕ್ಕೆ ಆಶಾ ಕಾರ್ಯಕರ್ತೆಯರು ಜನಜಾಗೃತಿ ಮೂಡಿಸಬೇಕು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಹೇಳಿದರು.


ತೋರಣಗಲ್ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಶನಿವಾರ ವಿಶ್ವ ಸೊಳ್ಳೆ ದಿನಾಚರಣೆ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸೊಳ್ಳೆ ನಿಯಂತ್ರಣ ಮಾಡಿದರೆ ಮಲೇರಿಯಾ, ಮಿದುಳು ಜ್ವರ, ಡೆಂೆ, ಚಿಕೂನ್ ಗುನ್ಯಾ ಕಾಯಿಲೆಗಳನ್ನು ತಡೆಯಬಹುದು. ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದರು.

ಗ್ರಾಪಂ ಸದಸ್ಯ ಎಚ್.ಹನುಮಂತಪ್ಪ ಮಾತನಾಡಿದರು. ಸಿಬ್ಬಂದಿ ಅಬ್ದುಲ್ ಸುಕೂರ್ ಸಾಬ್, ಪ್ರಶಾಂತ್ ಕುಮಾರ್, ಭಾಗ್ಯಲಕ್ಷ್ಮೀ, ಬಸಮ್ಮ, ಶಿವಲೀಲಾ, ಗೋವಿಂದಮ್ಮ, ಸಾವಿತ್ರಿ, ವೆಂಕಟಲಕ್ಷ್ಮೀ, ಶ್ರೀ ದೇವಿ, ರಾಜೇಶ್ವರಿ, ಆಶಾ, ಶಾಂತಮ್ಮ, ವಿಜಯಲಕ್ಷ್ಮೀ, ಕಾವೇರಿ, ಹಂಪಮ್ಮ, ಪದ್ಮಾ, ಮಂಜುಳಾ, ತೇಜಾ, ಎರ‌್ರೆಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net