ತುಂಗಭದ್ರಾ ನದಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಿ

ಗಂಗಾವತಿಯ ಲಿಟಲ್ ಹಾರ್ಟ್ಸ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ನಿರ್ಮಲ ತುಂಗಭದ್ರಾ ಅಭಿಯಾನ ಜಾಗೃತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ರಚಿಸಿದ ಟಾಕ್ ಷೋ ವಿಡೀಯೊವನ್ನು ರಾಜವಂಶಸ್ಥೆ ಲಲಿತಾರಾಣಿರಾಯಲು ಬಿಡುಗಡೆ ಮಾಡಿದರು. ಶಾಲಾಡಳಿತ ಮಂಡಳಿ ಕಾರ್ಯದರ್ಶಿ ಜಗನ್ನಾಥ ಆಲ್ಲಂಪಲ್ಲಿ, ಅಭಿಯಾನದ ಜಿಲ್ಲಾ ಸಂಚಾಲಕ ಡಾ.ಶಿವಕುಮಾರ ಮಾಲಿಪಾಟೀಲ್ ಇತರರಿದ್ದರು.

Published on

ಗಂಗಾವತಿ: ತುಂಗಭದ್ರಾ ನದಿಯ ಸ್ವಚ್ಛತೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕಿದ್ದು, ಅಭಿಯಾನದಲ್ಲಿ ಪಾಲ್ಗೊಳ್ಳುವುದು ನಿಜವಾದ ಕಾಳಜಿ ಎಂದು ರಾಜ ವಂಶಸ್ಥೆ ಲಲಿತಾರಾಣಿರಾಯಲು ಹೇಳಿದರು.

ನಗರದ ಲಿಟಲ್ ಹಾರ್ಟ್ಸ್ ಶಾಲೆಯಲ್ಲಿ ರಾಷ್ಟ್ರೀಯ ಸ್ವಾಭಿಮಾನ ಅಂದೋಲನ ಮತ್ತು ಪರ್ಯಾವರಣ ಟ್ರಸ್ಟ್‌ನಿಂದ ಶನಿವಾರ ಹಮ್ಮಿಕೊಂಡಿದ್ದ ನಿರ್ಮಲ ತುಂಗಭದ್ರಾ ಅಭಿಯಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೃಷಿ ಮತ್ತು ಕುಡಿವ ನೀರಿಗಾಗಿ ಮೀಸಲಿದ್ದ ತುಂಗಭದ್ರಾ ನದಿ ಇತ್ತೀಚೆಗೆ ಕಲುಷಿತಗೊಳ್ಳುತ್ತಿದ್ದು, ಸಾರ್ವಜನಿಕರು ಜಾಗೃತರಾಗಬೇಕಿದೆ ಎಂದು ತಿಳಿಸಿದರು. ಶಾಲಾಡಳಿತ ಮಂಡಳಿ ಕಾರ್ಯದರ್ಶಿ ಜಗನ್ನಾಥ ಆಲ್ಲಂಪಲ್ಲಿ ಮಾತನಾಡಿ, ಜನರಲ್ಲಿ ಜಾಗೃತಿ ಮೂಡಿಸಲು ವಿದ್ಯಾರ್ಥಿಗಳು ಟಾಕ್ ಷೋ ವಿಡಿಯೋ ತಯಾರಿಸಿದ್ದು, ಮೂರನೇ ಹಂತದ ಪಾದಯಾತ್ರೆಗೆ ಪೂರಕವಾಗಿ ಕಾರ್ಯನಿರ್ವಹಿಸಲಿದೆ ಎಂದರು.

ಶಾಲಾಡಳಿತ ಮಂಡಳಿ ಖಜಾಂಚಿ ಪ್ರಭಾಕರ, ಮುಖ್ಯಶಿಕ್ಷಕಿ ಪಿ.ಪ್ರಿಯಾಕುಮಾರಿ, ಅಭಿಯಾನದ ಜಿಲ್ಲಾ ಸಂಚಾಲಕ ಡಾ.ಶಿವಕುಮಾರ ಮಾಲಿಪಾಟೀಲ್, ಸದಸ್ಯರಾದ ವಿಷ್ಣುತೀರ್ಥ ಜೋಶಿ, ಮಹ್ಮದ್ ರಫೀ, ಅರ್ಜುನ್, ಪವಕುಮಾರ ಗುಂಡೂರು, ನಾಗರಾಜ ಗುತ್ತೇದಾರ್, ಸರ್ವೇಶ ವಸದ್, ಮಂಜುನಾಥ ಕಟ್ಟಿಮನಿ, ರಾಘವೇಂದ್ರ ತೂನಾ, ಕೃಷ್ಣ, ನೀಲಕಂಠ ಅರಹುಣಸಿ, ವೇಣುಗೋಪಾಲ, ಮಂಜುನಾಥ, ಸೋಮನಾಥ, ಛತ್ರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net