ಪರಿಸರ ಸಂರಕ್ಷಣೆಯ ಅರಿವು ಮೂಡಿಸಿ

19 BIRUR 01
Published on

ಬೀರೂರು: ಬದಲಾಗುತ್ತಿರುವ ಹವಾಮಾನ ವೈಪರಿತ್ಯ ಮತ್ತು ಪ್ರಾಕತಿಕ ಸಂಪತ್ತಿನ ಅತಿಯಾದ ಅವಲಂಬನೆಯಿಂದ ನೈಸರ್ಗಿಕ ಅಸಮತೋಲನ ಹೆಚ್ಚುತ್ತಿದ್ದು, ಪರಿಸರ ಸಂರಕ್ಷಣೆಗೆ ಕಾಳಜಿವಹಿಸಲು ವಿದ್ಯಾರ್ಥಿ ಸಮೂಹ ಮುಂದಾಗಬೇಕು ಎಂದು ವಿಜ್ಞಾನ ಶಿಕ್ಷಕ ಸಂಪತ್ ಕುಮಾರ್ ತಿಳಿಸಿದರು.
ಜೋಡಿತಿಮ್ಮಾಪುರ ಸರ್ಕಾರಿ ಪ್ರೌಢಾಶಾಲೆ ಆವರಣದಲ್ಲಿ ಇತ್ತೀಚೆಗೆ ಸಾಲುಮರದ ತಿಮ್ಮಕ್ಕ ಇಕೋ ಕ್ಲಬ್‌ನಿಂದ ಆಯೋಜಿಸಿದ್ದ ಹಸಿರು ಪರಿಸರ ರಕ್ಷಣೆ ಕಾರ್ಯಕ್ರಮದಲ್ಲಿ ಬೀಜದುಂಡೆ ತಯಾರಿಕೆ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.
ಬೀಜದುಂಡೆಗಳ ತಯಾರಿಕೆಗೆ ಸಗಣಿ ಮತ್ತು ಗೋ ಮೂತ್ರವನ್ನು ಬಳಸಿ, ಮಣ್ಣಿನ ಜತೆ ಮಿಶ್ರಗೊಳಿಸಿ ಹರಿಯುವ ನದಿ, ಹಳ್ಳಗಳ ಸುತ್ತಮುತ್ತಲಿನ ಪರಿಸರದಲ್ಲಿ ಹಾಕುವ ಮೂಲಕ ನಮ್ಮ ಮಕ್ಕಳಲ್ಲಿ ಸಸ್ಯ ಸಂರಕ್ಷಣೆಯ ಕಾಳಜಿ ಬೆಳೆಸಲಾಗುತ್ತಿದೆ. ಬೀಜದಿಂದ ಸಸಿಯೊಂದು ಮೊಳೆತು ಹೆಮ್ಮರವಾಗಿ ಬೆಳೆದಾಗ ನಮ್ಮ ಪ್ರಕೃತಿ ನಮಗೆ ಉತ್ತಮ ವಾತಾವರಣ ಸೃಷ್ಟಿಸುತ್ತದೆ. ಅದೇ ರೀತಿ ಮಕ್ಕಳಲ್ಲಿ ಪ್ರಕೃತಿ ಬಗೆಗಿನ ವೈಜ್ಞಾನಿಕ ಅರಿವು ಹೆಚ್ಚಿಸುವ ಕಾಳಜಿ ಬೆಳೆಸಿದಾಗ ಮಕ್ಕಳು ಸಹ ಪರಿಸರ ಸಂರಕ್ಷಣೆ ಕಾಳಜಿಗೆ ದನಿಯಾಗುತ್ತಾರೆ ಎಂದರು.
ವಿದ್ಯಾರ್ಥಿಗಳಾದ ಚಿನ್ಮಯಿ, ರಮೇಶ್, ಬಸವರಾಜ್, ಗೀತಾಂಜಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net