ಬಾಲ್ಯವಿವಾಹ, ಮಕ್ಕಳ ಸಾಗಾಣಿಕೆ ಬಗ್ಗೆ ಜಾಗೃತಿ ಮೂಡಿಸಿ,

ಅಳವಂಡಿ 1
ಹಟ್ಟಿ ಗ್ರಾಮ ಪಂಚಾಯತನಲ್ಲಿ ನಡೆದ ಮಹಿಳೆಯರ, ಮಕ್ಕಳ, ರಕ್ಷಣೆಯ ಕಾವಲು ಸಮೀತಿಯ ಸಭೆಯಲ್ಲಿ ಅಂಗನವಾಡಿ ಮೇಲ್ವಿಚಾರಕಿ ಬಸಮ್ಮ ಹಡಪದ ಮಾತನಾಡುತ್ತಿರುವುದು. ಕಾರ್ಯದರ್ಶಿ ಮಂಜುನಾಥಯ್ಯ, ಆರೋಗ್ಯ ನೀರಿಕ್ಷಣಾಧಿಕಾರಿ ಗವಿಸಿದ್ದಪ್ಪ, ಪ್ರಮುಖರಾದ ಗವಿಸಿದ್ದಪ್ಪ, ಗೋಣೆಪ್ಪ ಇದ್ದರು.
Published on

ಅಳವಂಡಿ: ಗ್ರಾಮೀಣ ಮಟ್ಟದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರು ಕೈಜೋಡಿಸಿದಾಗ ಮಾತ್ರ ಬಾಲ್ಯವಿವಾಹ, ಮಕ್ಕಳ ಸಾಗಾಣಿಕೆಯ ಕಾರ್ಯಗಳನ್ನು ತಡೆಗಟ್ಟಬಹುದು ಎಂದು ಅಂಗನವಾಡಿ ಮೇಲ್ವಿಚಾರಕಿ ಬಸಮ್ಮ ಹಡಪದ ತಿಳಿಸಿದರು.

ಸಮೀಪದ ಹಟ್ಟಿ ಗ್ರಾಮ ಪಂಚಾಯತನಲ್ಲಿ ನಡೆದ ಮಹಿಳೆಯರ, ಮಕ್ಕಳ, ರಕ್ಷಣೆಯ ಕಾವಲು ಸಮಿತಿಯ ರಚನಾ ಸಭೆ ಹಾಗೂ ಬಾಲ್ಯವಿವಾಹ, ಮಕ್ಕಳ ಸಾಗಾಣಿಕೆ ಮುಂತಾದ ವಿಷಯಗಳ ಕುರಿತು ನಡೆದ ಜಾಗೃತಿ ಸಭೆಯಲ್ಲಿ ಶುಕ್ರವಾರ ಮಾತನಾಡಿದರು.

ಕಾರ್ಯದರ್ಶಿ ಮಂಜುನಾಥಯ್ಯ ಮಾತನಾಡಿ, ಪಂಚಾಯತ, ಶಾಲೆ, ಅಂಗನವಾಡಿ, ಪೋಲಿಸ್, ಮಹಿಳಾ ಸಂಘಗಳು ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುವ ಮೂಲಕ ಬಾಲ್ಯವಿವಾಹ, ಮಕ್ಕಳ ಸಾಗಾಣಿಕೆ ತಡೆಯಬಹುದು.

ಇದರ ಬಗ್ಗೆ ಶಾಲೆಗಳಲ್ಲಿ ಮಕ್ಕಳಿಗೆ ಜಾಗೃತಿ ಮೂಡಿಸಬೇಕು. ವಲಸೆ ಹೋದ ಕುಟುಂಬ, ಕಾಣೆಯಾದವರ ಬಗ್ಗೆ, ಗ್ರಾಮಕ್ಕೆ ಆಗಮಿಸಿದ ಹೊಸಬರ ಬಗ್ಗೆ ನಿಗಾ ಇಡಬೇಕು ಎಂದರು.

ಆರೋಗ್ಯ ನೀರಿಕ್ಷಣಾಧಿಕಾರಿ ಗವಿಸಿದ್ದಪ್ಪ ಗೊಂದಿಹೊಸಳ್ಳಿ, ಪ್ರಮುಖರಾದ ಗವಿಸಿದ್ದಪ್ಪ, ಗೋಣೆಪ್ಪ, ಜಂದಿಸಾಬ, ಮಹ್ಮದ್‌ರಫೀ, ಚಂದ್ರಗಿರಿಯಪ್ಪ, ಭಾರತಿ, ಸರೋಜ ನಾಯಕ್, ಸುಮಂಗಲಾ, ಲಕ್ಷ್ಮಣ, ನಾಗಪ್ಪ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net