ಸ್ವಾತಂತ್ರೃ ಭವನಕ್ಕೆ ನಿವೇಶನ ಕಲ್ಪಿಸಿ

nmt
Published on

ನ್ಯಾಮತಿ: ಪಟ್ಟಣದಲ್ಲಿ ಸ್ವಾತಂತ್ರೃ ಭವನ ನಿರ್ಮಿಸಲು ಸರ್ಕಾರದಿಂದ ಸೂಕ್ತ ನಿವೇಶನ ನೀಡುವಂತೆ ಅವಳಿ ತಾಲೂಕಿನ ಸ್ವಾತಂತ್ರೃ ಹೋರಾಟಗಾರರು ಮತ್ತು ಉತ್ತರಾಧಿಕಾರಿಗಳ ಸಂಘದಿಂದ ಈಚೆಗೆ ತಹಸೀಲ್ದಾರ್, ಪಪಂ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಮನವಿ ಸಲ್ಲಿಸಿ ಮಾತನಾಡಿದ ಮುಖಂಡರು, ನ್ಯಾಮತಿಯ ಮುಖ್ಯರಸ್ತೆಯಲ್ಲಿ ಸ್ವಾತಂತ್ರೃ ಭವನ ನಿರ್ಮಿಸಬೇಕು ಹಾಗೂ ಸ್ವಾತಂತ್ರೃ ಹೋರಾಟಗಾರರಿಗೆ, ಉತ್ತರಾಧಿಕಾರಿಗಳಿಗೆ ಗುರುತಿನ ಚೀಟಿ ನೀಡಬೇಕು, ಜತೆಗೆ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯ ಕಲ್ಪಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎನ್.ಎಸ್. ರವೀಂದ್ರನಾಥ, ಎಚ್. ಯೋಗರಾಜ್, ಮಾಷ್ಟಿ ಮೀನಾಕ್ಷಮ್ಮ, ಜಿ. ಮಂಜುಳಾ, ಜೀನಕೇರಿ ಮಲ್ಲಿಕಾರ್ಜುನ, ಶಿವಕುಮಾರ್, ಕೆ.ಎಂ. ಬಸವರಾಜ್, ಓ.ಎಸ್. ಕುಮಾರ, ಎನ್.ಎಸ್. ನಾಗರಾಜ್, ಸೋಗಿ ಚಿದಾನಂದ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net