ಮನೆಯಲ್ಲಿ ಕಲಿಕಾ ವಾತಾವರಣ ನಿರ್ಮಿಸಿ

ಅಳವಂಡಿ ಸಮೀಪದ ನೀರಲಗಿ ಗ್ರಾಮದ ಸಹಿಪ್ರಾ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪಾಲಕರ ಸಭೆಯಲ್ಲಿದ್ದ ಪಾಲಕರು.
ಅಳವಂಡಿ ಸಮೀಪದ ನೀರಲಗಿ ಗ್ರಾಮದ ಸಹಿಪ್ರಾ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪಾಲಕರ ಸಭೆಯಲ್ಲಿದ್ದ ಪಾಲಕರು.
Published on

ಅಳವಂಡಿ: ಪಾಲಕರು ಮನೆಯಲ್ಲಿ ಕಲಿಕಾ ವಾತಾವರಣ ನಿರ್ಮಿಸಿ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಮುಖ್ಯಶಿಕ್ಷಕ ರಾಮಚಂದ್ರಗೌಡ ಗೊಂಡಬಾಳ ಹೇಳಿದರು. ಸಮೀಪದ ನೀರಲಗಿ ಗ್ರಾಮದ ಸಹಿಪ್ರಾ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪಾಲಕರ ಸಭೆಯಲ್ಲಿ ಮಾತನಾಡಿದರು. ಕಡ್ಡಾಯ ಶಿಕ್ಷಣ ನೀತಿ ಜಾರಿಯಲ್ಲಿದ್ದು, ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳುವುದು ಪಾಲಕರು ಹಾಗೂ ಶಿಕ್ಷಕರ ಕರ್ತವ್ಯ ಎಂದರು. ಪ್ರಮುಖರಾದ ಕೃಷ್ಣಪ್ಪ ತಳಕಲ್, ಹನುಮಂತಪ್ಪ ಕಟಂಬ್ಲಿ, ಆಶಾಬಿ ಹಡಗಲಿ, ಮಲ್ಲಪ್ಪ ಕುರಿ, ಭುವನೇಶ್ವರಿ ಗೊಂಡಬಾಳ, ಬೀರಪ್ಪ ಡೊಳ್ಳಿನ, ಸೋಮನಗೌಡ ಪಾಟೀಲ್, ಕರಕಪ್ಪ ಬಡಿಗೇರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net