ಫೆ.26ಕ್ಕೆ ದಾವಣಗೆರೆಗೆ ಕ್ರೇಜಿವಾಲ್

AAP (2)-02
Published on

ವಿಜಯವಾಣಿ ಸುದ್ದಿಜಾಲ ಚಿತ್ರದುರ್ಗ

ರಾಜ್ಯದಲ್ಲಿ ಪಕ್ಷದ ಬಲವರ್ಧನೆ, ಸಂಘಟನೆ ಸಲುವಾಗಿ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಹೊಸದಾಗಿ ಪದಾಧಿಕಾರಿಗಳ ನೇಮಕ ಮಾಡಲಾಗಿದೆ ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯ ಜಂಟಿ ಕಾರ‌್ಯದರ್ಶಿ ಬಿ.ಇ.ಜಗದೀಶ್ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾಧ್ಯಕ್ಷರಾಗಿದ್ದ ತಮ್ಮನ್ನು ಜಂಟಿ ಕಾರ‌್ಯದರ್ಶಿ ಹಾಗೂ ಇತರೆ ಪ್ರಮುಖರನ್ನು ನಾನಾ ಹುದ್ದೆಗಳಿಗೆ ರಾಜ್ಯ ಉಸ್ತುವಾರಿ ದಿಲೀಪ್‌ಪಾಂಡೆ ನೇಮಿಸಿದ್ದಾರೆ ಎಂದರು.

ಚಿತ್ರದುರ್ಗ ಜಿಲ್ಲಾಧ್ಯಕ್ಷರಾಗಿ ಎಚ್.ಎಂ.ಫಾರೂಕ್ ಆಜ್ಮತ್ ಅಲಿ, ಕೆ.ಲಕ್ಷ್ಮೀನಾರಾಯಣ ರೆಡ್ಡಿ-ಉಪಾಧ್ಯಕ್ಷ, ಟಿ.ಕೆಂಚಪ್ಪ-ಪ್ರಧಾನ ಕಾರ‌್ಯದರ್ಶಿ, ಇ.ಗಣೇಶ-ಸಂಘಟನಾ ಕಾರ‌್ಯದರ್ಶಿ, ಕುಬೇರನಾಯ್ಕ-ಕಾರ‌್ಯದರ್ಶಿ, ರಾಜಣ್ಣ-ಖಜಾಂಜಿ, ರಾಧಾ ಮಹಿಳಾ ವಿಭಾಗದ ಜಿಲ್ಲಾಧ್ಯಕ್ಷೆಯಾಗಿ ನೇಮಕವಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಚಿತ್ರದುರ್ಗದಿಂದ ನಾನು ಸ್ಪರ್ಧಿಸಲಿದ್ದು, ಹೊಸದಿಲ್ಲಿ ಮುಖ್ಯಮಂತ್ರಿ ಅರವಿಂದ ಕ್ರೇಜಿವಾಲ್ ದಾವಣಗೆರೆಗೆ ಫೆಬ್ರವರಿ 26ರಂದು ಭೇಟಿ ನೀಡಲಿದ್ದು, ಮಾರ್ಚ್‌ನಲ್ಲಿ ಚಿತ್ರದುರ್ಗದಲ್ಲಿ ಏರ್ಪಡಿಸುವ ಪಕ್ಷದ ಸಮಾವೇಶದಲ್ಲೂ ಭಾಗವಹಿಸಲಿದ್ದಾರೆ ಎಂದರು.

ಚಿತ್ರದುರ್ಗದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ವಿರುದ್ಧದ ಆರೋಪಗಳ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ ತೀವ್ರಗೊಳಿಸಲಾಗುವುದು, ಲೋಕಾಯುಕ್ಕಕ್ಕೂ ದೂರು ಸಲ್ಲಿಸುವುದಾಗಿ ಹೇಳಿದರು.

ಫಾರೂಕ್ ಆಜ್ಮತ್ ಅಲಿ ಮಾತನಾಡಿ, ಜೆಸಿಬಿ, ಹಿಟಾಚಿ ಹಾಗೂ ರಾಕ್ಷಸ ಪಾರ್ಟಿಗಳೆಂದು ಪ್ರತಿಪಕ್ಷಗಳ ಹೆಸರು ಹೇಳದೆ ಜರಿದರು.

ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳಂತೆ ಜನರಿಗೆ ಈವರೆಗೂ ಸರಿಯಾಗಿ ಮೂಲ ಸೌಕರ್ಯಗಳು ದೊರೆತಿಲ್ಲ. ಆಡಳಿತ ರೂಢ ಬಿಜೆಪಿ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ತಕ್ಕಪಾಠ ಕಲಿಸಲು ಮತದಾರರು ತೀರ್ಮಾನಿಸಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net