ಅಪಘಾತ ತಡೆಗೆ ಎಲ್ಲರೂ ಸಹಕರಿಸಿ

11mdl02
ಮುದಗಲ್ ಸಮೀಪದ ಛತ್ತರ ಗ್ರಾಮದಲ್ಲಿ ಪೊಲೀಸ್ ಇಲಾಖೆಯಿಂದ ಜರುಗಿದ ಜನಸಂಪರ್ಕ ಸಭೆಯಲ್ಲಿ ಡಿ.ವೈ.ಎಸ್.ಪಿ ದತ್ತಾತ್ರೇಯ ಕಾರ್ನಾಡ್ ಮಾತನಾಡಿದರು. ಮಸ್ಕಿ ವೃತ್ತ ನಿರೀಕ್ಷಕ ಬಾಲಚಂದ್ರ ಲಕ್ಕಂ, ಮುದಗಲ್ ಠಾಣೆ ಪಿ.ಎಸ್.ಐ ವೆಂಕಟೇಶ ಮಾಡಗೇರಿ ಇತರರಿದ್ದರು.
Published on

ಮುದಗಲ್: ವಾಹನ ಚಾಲಕರು ಪಾದಚಾರಿಗಳು ರಸ್ತೆ ಮೇಲೆ ಚಲಿಸುವಾಗ ಸಂಚಾರಿ ನಿಯಮ ಪಾಲಿಸಿ ಎಂದು ಲಿಂಗಸಗೂರು ಉಪ ವಿಭಾಗದ ಡಿ.ವೈ.ಎಸ್.ಪಿ ದತ್ತಾತ್ರೇಯ ಕಾರ್ನಾಡ ಎಂದರು.

ಸಮೀಪದ ಛತ್ತರ ಗ್ರಾಮದಲ್ಲಿ ಪೊಲೀಸ್ ಠಾಣೆಯಿಂದ ಶನಿವಾರ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು.

ಶ್ರಾವಣ ಮಾಸದ ಪ್ರಯುಕ್ತ ಆಂಜನೇಯ ದೇವಸ್ಥಾನಕ್ಕೆ ತಾವರಗೇರಿ, ಮುದಗಲ್ ಸೇರಿ ಅನ್ಯ ಪಟ್ಟಣದಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಪಾದಯಾತ್ರೆ ಕೈಗೊಳ್ಳುತ್ತಿದ್ದು ಪ್ರತಿಯೊಬ್ಬರೂ ರಸ್ತೆ ದಾಟುವಾಗ ನಿಯಮಗಳನ್ನು ಪಾಲನೆ ಮಾಡಿ. ಬೈಕ್ ಸೇರಿ ತ್ರಿಚಕ್ರ ಹಾಗೂ ಕಾರುಗಳ ವಿಮೆ ಪ್ರತಿಯೊಬ್ಬರೂ ಮಾಡಿಸಿ. ಅಪಘಾತಗಳ ಸಂಖ್ಯೆ ಕಡಿಮೆಯಾಗಲು ಸಹಕಾರಿಸಿ ಎಂದರು.

ಮಸ್ಕಿ ವೃತ್ತ ನಿರೀಕ್ಷಕ ಬಾಲಚಂದ್ರ ಲಕ್ಕಂ ಮಾತನಾಡಿ, ರಸ್ತೆ ಸುರಕ್ಷತಾ ಸಪ್ತಾಹ ಸಂದರ್ಭದಲ್ಲಿ ಮಾತ್ರವಲ್ಲದೇ ಅಲ್ಲಲ್ಲಿ ಪೊಲೀಸರು ವಾಹನಗಳ ದಾಖಲೆಗಳ ಪರಿಶೀಲನೆ ಮತ್ತು ವಾಹನ ತಪಾಸಣೆ ಕಾರ್ಯಕ್ಕೆ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದರು.
ಪಿ.ಎಸ್.ಐ ವೆಂಕಟೇಶ ಮಾಡಗೇರಿ, ನಾಗಲಾಪೂರ ಗ್ರಾ.ಪಂ ಅಧ್ಯಕ್ಷ ಮೇಘಪ್ಪ ರಾಠೋಡ, ಸಿಬ್ಬಂದಿ ಅಮರೇಶ, ಮಂಜುನಾಥ, ಸೇರಿ ಗ್ರಾಮಸ್ಥರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net