ಬುದ್ಧಿಮಾಂದ್ಯರಿಗೆ ಕ್ರಾಫ್ಟ್ ತಯಾರಿ ತರಬೇತಿ

bmr
Published on

ಬ್ರಹ್ಮಾವರ: ಸಾಲ್ಮರದಲ್ಲಿರುವ ಬೌದ್ಧಿಕ ದಿವ್ಯಾಂಗರ ವಸತಿ ಕೇಂದ್ರದ ಬಳಿಯಿರುವ ಸ್ಪಂದನ ವಸತಿ ಕೇಂದ್ರದಲ್ಲಿ ವಿವಿಧ ರಾಜ್ಯಗಳಿಗೆ ಸೇರಿದ 55 ಬುದ್ಧಿಮಾಂದ್ಯ ಪುರುಷರಿಗೆ ಕರಕುಶಲ ಸಹಿತ ವಿವಿಧ ಕಲೆಗಳನ್ನು ಕಲಿಸಲಾಗುತ್ತಿದೆ. 24 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆಯಲ್ಲಿ ಬುದ್ಧಿಮಾಂದ್ಯರಿಗೆ ನಿಸರ್ಗದತ್ತ ವಸ್ತುಗಳಿಂದ ಬ್ಯಾಗ್, ಬತ್ತಿ, ಗ್ರೀಟಿಂಗ್ ಕಾರ್ಡ, ಅಲಂಕಾರಿಕ ಹೂವುಗಳ ತಯಾರಿ, ಮಣ್ಣಿನ ಹಣತೆ ತಯಾರಿ ಹಾಗೂ ಬಣ್ಣ ಬಳಿಯುವಿಕೆ ಸಹಿತ ವಿವಿಧ ಕರಕುಶಲ ವಸ್ತುಗಳ ತಯಾರಿ ಕುರಿತು ತರಬೇತಿ ನೀಡಲಾಗುತ್ತಿದೆ. ನುರಿತ ಕಲಾವಿದರು, ತರಬೇತುದಾರರು ಕಾರ್ಯನಿರ್ವಹಿಸುತ್ತಿದ್ದಾರೆ. ಸಂಸ್ಥೆಯ ಸ್ಥಾಪಕ ಜನಾರ್ದನ ಹಾಗೂ ಆರು ಸಿಬ್ಬಂದಿ ನೇತೃತ್ವ ವಹಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net